ಸ್ವಚ್ಛತೆ ಆರೋಗ್ಯಕ್ಕೆ ಸಹಕಾರಿ

FotoJet 222
Published on

ಶ್ರೀನಿವಾಸಪುರ:ಶಾಲಾ&ಕಾಲೇಜಿನ ಹೆಣ್ಣುಮಕ್ಕಳು ರಕ್ತಹಿನತೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ನಮ್ಮ ಆರೋಗ್ಯ ಇಲಾಖೆಯಿಂದ ತಪಾಸಣೆ ಮಾಡಿ, ಕಬ್ಬಿಣಾಂಶ ಮಾತ್ರೆ ನೀಡಲಾಗುತ್ತಿದೆ. ಮುಟ್ಟಿನ ಸಮಸ್ಯೆ ಇನ್ನಿತರ ದೈಹಿಕ, ಮಾನಸಿಕ ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ವೈದ್ಯರೊಂದಿಗೆ ಚರ್ಚಿಸಬೇಕು ಎಂದು ಸ್ಥಳಿಯ ವೈದ್ಯಾಧಿಕಾರಿ ಸಿಂಧು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಶನಿವಾರ ಮುತ್ತಕಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯೋಜನಾ ಶಿಬಿರದಲ್ಲಿ ಪೌಷ್ಟಿಕತೆ ಮತ್ತು ಹೆಣ್ಣುಮಕ್ಕಳ ಆರೋಗ್ಯ ವಿಷಯ ಕುರಿತು ಮಾತನಾಡಿ, ಇತ್ತೀಚಿನ ವಿದ್ಯಾರ್ಥಿಗಳಿಗೆ ಫಾಸ್ಟ್​ ಫುಡ್​ ವ್ಯಾಮೋಹ ಹೆಚ್ಚಾಗಿದೆ. ಸೊಪ್ಪು, ತರಕಾರಿ, ಮೊಟ್ಟೆ, ಹಣ್ಣು, ಇತ್ಯಾದಿ ಪೌಷ್ಟಿಕ ಆಹಾರ ಸೇವಿಸಬೇಕು. ಧೂಮಪಾನ, ಪಾನ್​, ಗುಟ್ಖಾ ಸೇವನೆ ಆರೋಗ್ಯಕ್ಕೆ ಹಾನಿಕರ. ಕೈ, ಬಾಯಿಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವೂ ಸ್ವಚ್ಛತೆಯಿಂದ ಕೂಡಿರಬೇಕು ಎಂದರು.

ನಿವೃತ್ತ ಉಪನ್ಯಾಸಕಿ ಕಮಲಾ ಹೆಗಡೆ ಮಾತನಾಡಿ, ಎನ್​ಎಸ್​ಎಸ್​ ಕಾರ್ಯ ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಇಲ್ಲಿ ಭಾಗವಹಿಸಿ ಪಡೆಯುವ ಸೇವಾ ಪ್ರಮಾಣ ಪತ್ರ ಮುಂದೆ ನಿಮ್ಮ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕೂ ನೆರವಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net