ಸ್ವಚ್ಛತೆ ಪಾಲಿಸಿದರೆ ಆರೋಗ್ಯಪೂರ್ಣ ಸಮಾಜ

30 GJD-3
Published on

ಗಜೇಂದ್ರಗಡ: ಕರೊನಾ ನಮಗೆ ಆರೋಗ್ಯ ಪಾಠ ಕಲಿಸಿದೆ. ಎಲ್ಲರೂ ವೈಯಕ್ತಿಕ ಸ್ವಚ್ಛತೆ ಪಾಲಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಿಸಬಹುದು ಎಂದು ಪುರಸಭೆ ಆರೋಗ್ಯ ನಿರೀಕ್ಷಕ ರಾಘವೇಂದ್ರ ಮಂತಾ ಹೇಳಿದರು.

ಪಟ್ಟಣದ ಕಟ್ಟಿಬಸವೇಶ್ವರ ದೇವಸ್ಥಾನದಲ್ಲಿ ಪುರಸಭೆ ಪೌರಕಾರ್ಮಿಕರಿಂದ ಸ್ವಚ್ಛತೆಯೇ ಸೇವೆ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಏಳು ವರ್ಷದ ಹಿಂದೆ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದ್ದರು. ಸ್ವಚ್ಛತೆಯೇ ಸೇವಾ ಆಂದೋಲನ ಕೆಲವು ದಿನಕ್ಕೆ ಸೀಮಿತವಾಗದೆ, ಇಡೀ ವರ್ಷ ನೈರ್ಮಲ್ಯಕ್ಕೆ ಆದ್ಯತೆ ಸಿಗಬೇಕು. ಪ್ರತಿಯೊಬ್ಬರೂ ರೋಗಮುಕ್ತರಾಗಲು ಸ್ವಚ್ಛತೆ ಮುಖ್ಯ. ಈ ಅಭಿಯಾನದಡಿ 46 ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು 46 ಮಂದಿರ, ಮಸೀದಿ, ಸರ್ಕಾರಿ ಕಚೇರಿಗಳನ್ನು ಶುಚಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಚಿನ್ನವ್ವ ಹೊಸಮನಿ, ಭೀಮವ್ವ ಚಲವಾದಿ, ಲಿಂಬವ್ವ ಮಾದರ, ಫಕೀರವ್ವ ಹೊಸಮನಿ, ರೇಣವ್ವ ತೋಟಗಂಟಿ, ಸರಸ್ವತಿ ಚಲವಾದಿ, ಲಕ್ಷ್ಮವ್ವ ಸವಡಿ, ಕನಕವ್ವ ಮಾದರ, ಲಕ್ಷ್ಮಣ ಮಾದರ, ರಮೇಶ ಅಂಬೋರೆ, ಪರಸಪ್ಪ ಹೊಸಮನಿ, ರಫೀಕ್ ಹವಾಲ್ದಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net