ಗುಡ್ಡಗಾಡು ಓಟ ಮಾರ್ಗದಲ್ಲಿ ಸ್ವಚ್ಛತೆ

New Project (9)
Published on

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನಡೆದ ರಾಷ್ಟ್ರಮಟ್ಟದ ಪುರುಷರ ಗುಡ್ಡಗಾಡು ಓಟ ಸ್ಪರ್ಧೆಯ ಬಳಿಕ ಸ್ಪರ್ಧೆ ನಡೆದ ಬೀದಿಯುದ್ದಕ್ಕೂ ಎಸೆಯಲ್ಪಟ್ಟಿದ್ದ ಕಸಕಡ್ಡಿಗಳನ್ನು ಗುರುವಾರ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಡಿ ತೆರವುಗೊಳಿಸಿದರು.

ಗುಡ್ದಗಾಡು ಓಟದ ಮಾರ್ಗದುದ್ದಕ್ಕೂ ಸ್ಪರ್ಧಾಳುಗಳಿಗೆ ನೀರಿನ ಬಾಟ್ಲಿ, ಐಸ್, ಸ್ಪಾಂಜ್‌ಗಳನ್ನು ಒದಗಿಸಲಾಗಿತ್ತು. ಸ್ಪರ್ಧಾಳುಗಳು ಉಪಯೋಗಿಸಿ ಬಿಸಾಡಿದ ವಸ್ತುಗಳು ಮಾರ್ಗದುದ್ದಕ್ಕೂ ಇರುವುದನ್ನು ಕಂಡ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಡಮಾರ ವಿದ್ಯಾರ್ಥಿಗಳೊಡಗೂಡಿ ಸ್ವಚ್ಛಗೊಳಿಸಿದರು. ಸ್ಪರ್ಧಾಳುಗಳು ವಾಸ್ತವ್ಯ ಹೂಡಿದ ಎಲ್ಲ ವಿದ್ಯಾಸಂಸ್ಥೆಗಳ ಶೌಚ ಮತ್ತು ಸ್ನಾನಗೃಹಗಳ ಸ್ವಚ್ಛತೆ ಹಾಗೂ ಕ್ರಿಮಿನಾಶಕಗಳ ಸಿಂಪಡಣೆಯನ್ನು ಪಂಚಾಯಿತಿ ಆಡಳಿತದ ಸಹಕಾರದೊಂದಿಗೆ ನಡೆಸಲಾಯಿತು.

ಸ್ಪರ್ಧಾಳುಗಳು ಚೇತರಿಕೆ: ಗುಡ್ದಗಾಡು ಓಟದ ವೇಳೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅಸ್ವಸ್ಥರಾಗಿದ್ದ ಹಲವಾರು ವಿದ್ಯಾರ್ಥಿಗಳಿಗೆ ಉಪ್ಪಿನಂಗಡಿ ಹಾಗೂ ಪುತ್ತೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗಿದ್ದು, ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net