ಕಿಬ್ಬೆಟ್ಟ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಸ್ವಚ್ಛತೆ

17spt1
ಸೋಮವಾರಪೇಟೆ ಸಮೀಪದ ಕಿಬ್ಬೆಟ್ಟ ಶ್ರೀ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಿದ್ದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಯಿತು.
Published on

ಸೋಮವಾರಪೇಟೆ: ರಾಣಿ ಅಹಲ್ಯಾ ಬಾಯಿ ಹೋಳ್ಕರ್ ತ್ರಿಶತಾಬ್ದಿ ಆಚರಣೆ ಸಮಿತಿ ಸೋಮವಾರಪೇಟೆ ವತಿಯಿಂದ ಶಿವಭಕ್ತೆ ಅಹಲ್ಯಾ ಅವರ 300ನೇ ವರ್ಷದ ಜಯಂತಿ ಕಾರ್ಯಕ್ರಮ ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ದೇವಾಲಯ ಆವರಣದಲ್ಲಿ ಸ್ವಚ್ಛತೆ ನಡೆಯಿತು.

ಲೇಖಕಿ ಜಲಕಾಳಪ್ಪ ಮಾತನಾಡಿ, ಮರಾಠ ಸಾಮ್ರಾಜ್ಯದಲ್ಲಿದ್ದ ಮಾಲ್ವ ಪ್ರಾಂತ್ಯದ ರಾಣಿಯಾಗಿದ್ದರು. 34 ವರ್ಷಗಳ ಕಾಲ ರಾಜ್ಯವನ್ನಾಳಿದ ವಿಶ್ವದ ಏಕೈಕ ವೀರ ರಾಣಿ. ಇವರನ್ನು ದೇವಾಲಯ ರಾಣಿ ಎಂದು ಕರೆಯುತ್ತಾರೆ ಎಂದು ಹೇಳಿದರು.

ಈಕೆ ನಿರ್ಮಿಸಿರುವ ದೇವಾಲಯಗಳು, ಸ್ನಾನಘಟ್ಟಗಳು, ಧರ್ಮಛತ್ರಗಳು ಭಾರತೀಯ ವಾಸ್ತುಶಿಲ್ಪ ಮತ್ತು ಅದರ ವಿವಿಧ ವೈಶಿಷ್ಟ್ಯಗಳನ್ನು ಅಭಿವ್ಯಕ್ತಪಡಿಸುತ್ತವೆ ಎಂದರು.

ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಆಕ್ರಮಣಕಾರಿಗಳಿಂದ ಭಗ್ನವಾಗಿದ್ದ ಸುಮಾರು 3115 ಶಿವನ ದೇವಸ್ಥಾನಗಳ ಜತೆಗೆ 12 ಜ್ಯೋತಿಲಿರ್ಂಗಗಳನ್ನು ಮರು ಪ್ರತಿಷ್ಠಾಪಿಸಿದ ಮಹಾನ್ ಶಿವ ಭಕ್ತಿಯಾಗಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ಪವಿತ್ರಾ ಶೇಷಾದ್ರಿ, ಪುಷ್ಪಾ ನರೇಶ್, ಭಾನುಮತಿ ಆದರ್ಶ್, ರೂಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net