ಶುಚಿತ್ವ ಇದ್ದಲ್ಲಿ ಆರೋಗ್ಯ ಉಂಟು

06Huk1-Web
ಯಾದಗೂಡ ಗ್ರಾಮದಲ್ಲಿ ಶಾಸಕ ಉಮೇಶ ಕತ್ತಿ ಕಸದ ತೊಟ್ಟಿ ವಿತರಿಸಿದರು. ಮೋಹನ ವ್ಯಾಘ್ರಾ, ದಿಲೀಪ ವಾಳಿಖಿಂಡಿ, ಮಲ್ಲಪ್ಪ ಅರಳಿಮಟ್ಟಿ, ಶಿವಗೌಡ ಪಾಟೀಲ, ಎಂ.ಐ.ಜನ್ಮಟ್ಟಿ, ಸಿದ್ದಪ್ಪ ಮಗೆಪ್ಪಗೋಳ, ಶ್ರೀಶೈಲ ಹಿರೇಮಠ ಇತರರು ಇದ್ದರು.
Published on

ಹುಕ್ಕೇರಿ: ಉತ್ತಮ ಆರೋಗ್ಯಕ್ಕೆ ಪರಿಸರ ಶುಚಿತ್ವ ಅವಶ್ಯ. ಆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ಸಾರ್ವಜನಿಕರು ಕೂಡ ಸ್ವಚ್ಛತೆ ಕುರಿತು ಗಮನ ಹರಿಸಬೇಕು ಎಂದು ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

ತಾಲೂಕಿನ ಯಾದಗೂಡ ಗ್ರಾಮದಲ್ಲಿ ಭಾನುವಾರ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ನಿಧಿಯಿಂದ ಹಂಚಿಕೆ ಮಾಡಿದ ಕಸ ಸಂಗ್ರಹ ತೊಟ್ಟಿ ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪಟ್ಟಣ ವಾಸಿಗಳಿಗಿಂತ ಗ್ರಾಮದ ನಿವಾಸಿಗಳು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಜನರು ಕಸದ ತೊಟ್ಟಿಗಳಲ್ಲಿಯೇ ಕಸ ಹಾಕುವಂತೆ ಪಂಚಾಯಿತಿ ಸಿಬ್ಬಂದಿ ತಿಳಿವಳಿಕೆ ಮೂಡಿಸಬೇಕು ಎಂದರು.

ನಂತರ ಗ್ರಾಮದಲ್ಲಿನ ಕೆರೆ ದಂಡೆ ಮೇಲೆ ವಾಯು ವಿಹಾರಕ್ಕೆ ಆಗಮಿಸುವ ಗ್ರಾಮಸ್ಥರು, ಮಕ್ಕಳಿಗಾಗಿ ಕುಳಿತುಕೊಳ್ಳಲು ನಿರ್ಮಿಸಲಾದ ಸಿಮೆಂಟ್ ಕಟ್ಟೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿ ಮತ್ತು ಆರ್‌ಎಸ್‌ಎಸ್ ಪ್ರಮುಖ ಮೋಹನ ವ್ಯಾಘ್ರಾ, ದಿಲೀಪ ವಾಳಿಖಿಂಡಿ, ಮಲ್ಲಪ್ಪ ಅರಳಿಮಟ್ಟಿ, ಶಿವಗೌಡ
ಪಾಟೀಲ, ಎಂ.ಐ.ಜನ್ಮಟ್ಟಿ, ಸಿದ್ದಪ್ಪ ಮಗೆಪ್ಪಗೋಳ, ಶ್ರೀಶೈಲ ಹಿರೇಮಠ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುತ್ತೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net