

ಮಂಗಳೂರು: ಸ್ವಚ್ಛತೆ, ಸುಸ್ಥಿರತೆಯನ್ನು ಉತ್ತೇಜಿಸುವ ಸಾರ್ವಜನಿಕ ಜಾಗೃತಿ ಅಂಗವಾಗಿ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಸ್ವಚ್ಛತಾ ಹಿ ಸೇವಾ ವಿಶೇಷ ಅಭಿಯಾನ ರತ್ನಗಿರಿಯಲ್ಲಿ ನೆರವೇರಿತು. ಕೊಂಕಣ ರೈಲ್ವೇ ಸಿಎಂಡಿ ಸಂತೋಷ್ ಕುಮಾರ್ ಝಾ, ಪ್ರಮುಖರಾದ ಮನೀಶಾ ಝಾ, ಪ್ರಭಾತ್ ಪೇರಿ ಅಭಿಯಾನದಲ್ಲಿ ಭಾಗವಹಿಸಿದರು. ಕೊಂಕಣ ರೈಲ್ವೆಯು ಬೆಲಾಪುರದ ಕಾರ್ಪೊರೇಟ್ ಕಚೇರಿ ಸೇರಿದಂತೆ ರತ್ನಗಿರಿ ಮತ್ತು ಕಾರವಾರ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮ ನೆರವೇರಿತು. ಚಿಪ್ಲುನ್ ಮತ್ತು ವೆರ್ನಾ ನಿಲ್ದಾಣಗಳಲ್ಲೂ ಹಲವು ಜಾಗೃತಿ ಕಾರ್ಯಕ್ರಮ ನಡೆಯಿತು. ಪೆರ್ನೆಮ್‌ನ ಸಂತ ಸೊಹಿರೋಬನಾಥ್ ಅಂಬಿಯೆ ಕಾಲೇಜು ಮತ್ತು ಮಡಗಾಂವ್‌ನ ಕೊಂಕಣ ರೈಲ್ ಅಕಾಡೆಮಿಯು ಪ್ರಶಿಕ್ಷಣಾರ್ಥಿಗಳೂ ಈ ಜಾಗೃತಿಯಲ್ಲಿ ಕೈಜೋಡಿಸಿದರು. ರತ್ನಗಿರಿ ಪ್ರದೇಶದಾದ್ಯಂತ ಅಮೃತ್ ಸಂವಾದ್ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಕೊಂಕಣ ರೈಲ್ವೆ ತಿಳಿಸಿದೆ.