ಬೋಂದೆಲ್ ಸೈಂಟ್ ಲಾರೆನ್ಸ್ ಚರ್ಚ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಬೋಂದೆಲ್ ಚರ್ಚ್‌ನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಫಾ.ಬಾಸಿಲ್ ವಾಸ್, ಫಾ.ಲಾರೆನ್ಸ್ ಕುಟಿನ್ಹಾ, ಪ್ರಶಾಂತ್ ಪೈ, ಸಂದೀಪ್, ಸುಜಾತ ಮಾರ್ಲ ಮೊದಲಾದವರಿದ್ದರು.
ಬೋಂದೆಲ್ ಚರ್ಚ್‌ನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಫಾ.ಬಾಸಿಲ್ ವಾಸ್, ಫಾ.ಲಾರೆನ್ಸ್ ಕುಟಿನ್ಹಾ, ಪ್ರಶಾಂತ್ ಪೈ, ಸಂದೀಪ್, ಸುಜಾತ ಮಾರ್ಲ ಮೊದಲಾದವರಿದ್ದರು.
Published on
ಮಂಗಳೂರು: ಬೋಂದೆಲ್ ಸೈಂಟ್ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಪೂರ್ವಸಿದ್ಧತಾ ಕಾರ್ಯಕ್ರಮದ ಭಾಗವಾಗಿ, ಚರ್ಚ್‌ನ ಪರಿಸರ ಆಯೋಗ, ಕಾರ್ಮಿಕ ಆಯೋಗ ಮತ್ತು ಸಾಮಾಜಿಕ ಅಭಿವೃದ್ಧಿ ಆಯೋಗಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಜಾಸ್ಮಿನ್ ಡಿಸೋಜ ಮತ್ತು ತಂಡದ ನೇತೃತ್ವದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ಬಳಿಕ ಸಹಾಯಕ ಧರ್ಮ ಗುರು ವಂದನೀಯ ಫಾ.ಲಾರೆನ್ಸ್ ಕುಟಿನ್ಹಾ ನೇತೃತ್ವದಲ್ಲಿ ಉದ್ಘಾಟನಾ ಪ್ರಾರ್ಥನೆ ನಡೆಯಿತು.
ವನ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಜೀತ್ ರೋಚ್ ಮಾತನಾಡಿ, ಮಂಗಳೂರಿನ ತ್ಯಾಜ್ಯ ನಿರ್ವಹಣಾ ಸವಾಲುಗಳನ್ನು ಪರಿಹರಿಸಲು ಒಣ ತ್ಯಾಜ್ಯ, ಹಸಿ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಮತ್ತು ಇ-ತ್ಯಾಜ್ಯಗಳ ಪರಿಣಾಮಕಾರಿ ವಿಂಗಡಣೆ ಅತ್ಯಗತ್ಯ. ಮಂಗಳೂರನ್ನು ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ನಗರವನ್ನಾಗಿ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾ.ಬಾಸಿಲ್ ವಾಸ್ ಅಧ್ಯಕ್ಷತೆ ವಹಿಸಿದ್ದರು. ಉತ್ತಮ ಆರೋಗ್ಯ ಮತ್ತು ಸ್ವಚ್ಛ ಪರಿಸರವನ್ನು ಉತ್ತೇಜಿಸುವುದಲ್ಲದೆ ಮನಸ್ಸು ಮತ್ತು ಆತ್ಮಕ್ಕೆ ಸಂತೋಷ ಮತ್ತು ಶಾಂತಿಯನ್ನು ತರುವ ಒಂದು ಪುಣ್ಯ ಕಾರ್ಯ. ದೇವರ ಸೃಷ್ಟಿಯನ್ನು ನೋಡಿಕೊಳ್ಳಲು ಜನರು ನಿಸ್ವಾರ್ಥ ಸೇವೆಯ ಮನೋಭಾವದಿಂದ ಒಟ್ಟುಗೂಡಿದಾಗ, ಅವರು ನಿಜವಾದ ಸಂತೋಷವನ್ನು ಅನುಭವಿಸುತ್ತಾರೆ ಮತ್ತು ದೇವರ ಆಶೀರ್ವಾದದ ಸಾಧನಗಳಾಗುತ್ತಾರೆ ಎಂದರು.
ಪದವಿನಂಗಡಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತಾಧಿಕಾರಿ ಪ್ರಶಾಂತ್ ಪೈ, ಪದವಿನಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ್, ಪದವಿನಂಗಡಿ ವಾರ್ಡ್ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಸುಜಾತಾ ಮಾರ್ಲ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಡಿಸಿಲ್ವಾ, ಕಾರ್ಯದರ್ಶಿ ಅಲ್ವಿನ್ ಸಲ್ಡಾನ್ಹಾ, ಸೈಂಟ್ ಲಾರೆನ್ಸ್ ಪುಣ್ಯ ಕ್ಷೇತ್ರ ಸಮಿತಿಯ ಜೇಸನ್ ಫನಾರ್ಂಡಿಸ್, ಆಯೋಗದ ಸಂಚಾಲಕರಾದ ಅವಿತಾ ಮಸ್ಕರೇನ್ಹಸ್, ಪಚ್ಚನಾಡಿ ವಾರ್ಡ್‌ನ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಮಿನೇಜಸ್ ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ಪರಿಸರ ಆಯೋಗದ ಸಂಚಾಲಕ ರಾದ ಲೂಸಿ ಪಿಂಟೊ, ಸ್ಟೀವನ್ ಡಿಸಿಲ್ವಾ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಮತ್ತು ಎಂವಿ ಶೆಟ್ಟಿ ನಸಿರ್ಂಗ್ ಕಾಲೇಜಿನ ರೆಲಿನಾ ಸಲ್ಡಾನ್ಹಾ ಅತಿಥಿಗಳಾಗಿದ್ದರು.
ಎಂವಿ ಶೆಟ್ಟಿ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿ, ಬೆಂಬಲ ನೀಡಿದರು. ಅವಿತಾ ಮಸ್ಕರೇನ್ಹಸ್ ಸ್ವಯಂಸೇವಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪರಿಸರ ಆಯೋಗದ ಸಂಚಾಲಕ ಸ್ಟೀವನ್ ಡಿಸಿಲ್ವಾ ಉಪಸ್ಥಿತರಿದ್ದರು. ಕಾರ್ಮಿಕ ಆಯೋಗದ ಸಂಚಾಲಕ ಫೆಲಿಕ್ಸ್ ಮೊಂತೇರೊ ಸ್ವಾಗತಿಸಿದರು. ಲೂಸಿ ಪಿಂಟೊ ವಂದಿಸಿದರು. ಜಾಸ್ಮಿನ್ ಡಿಸೋಜ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net