ಹೊಸೂರು ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ

h2-nwksrtc
Published on

ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ನಗರದ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ರೋಟರಿ ಕ್ಲಬ್ ಹುಬ್ಬಳ್ಳಿ ಎಲೈಟ್ ಸಹಯೋಗದೊಂದಿಗೆ ಬುಧವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಎನ್‌ಡಬ್ಲುೃಕೆಎಸ್‌ಆರ್‌ಟಿಸಿ ಎಂ.ಡಿ. ಪ್ರಿಯಾಂಗಾ ಎಂ. ಅವರು ನೇತೃತ್ವದಲ್ಲಿ ಸಸಿ ನೆಡಲಾಯಿತು.
ಇಲಾಖಾ ಮುಖ್ಯಸ್ಥ ವಿವೇಕಾನಂದ ವಿಶ್ವಜ್ಞ, ಪಿ.ವೈ. ನಾಯಕ, ವಿಜಯಶ್ರೀ ನರಗುಂದ, ಗಣೇಶ ರಾಠೋಡ, ಮಾಲತಿ.ಎಸ್.ಎಸ್., ದಿವಾಕರ ಯರಗೊಪ್ಪ, ಇಸ್ಮಾಯಿಲ್ ಕಂದಗಲ್, ಅಧಿಕಾರಿಗಳಾದ ಜಿ. ವಿಜಯಕುಮಾರ, ಎಂ.ಬಿ. ಕಪಲಿ, ದಶರಥ ಕೆಳಗೇರಿ, ರವಿ ಅಂಚಿಗಾವಿ, ಜಿ. ಶ್ರೀನಾಥ, ಹು-ಧಾ ನಗರ ಸಾರಿಗೆ ಹಾಗೂ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಂ. ಸಿದ್ಧಲಿಂಗೇಶ, ಎಚ್. ರಾಮನಗೌಡರ, ಪಿ.ಆರ್. ಕಿರಣಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net