ಸಿದ್ಧಾರೂಢ ಮಠದ ಕೆರೆಯ ಸುತ್ತ ಸ್ವಚ್ಛತೆ

siddharodha math lake
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸ್ವಚ್ಛತಾ ಆಂದೋಲನ ಪರಿವಾರದ ಮಿತ್ರರು ನಗರದ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಆವರಣದಲ್ಲಿರುವ ಕೆರೆಯ ಸುತ್ತಮುತ್ತ ಸ್ವಚ್ಛತೆ ಕಾರ್ಯ ಕೈಗೊಂಡರು.

ಮುಂಬರುವ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಮಠದ ವತಿಯಿಂದ ಮಠದ ಆವರಣ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅವರೊಂದಿಗೆ ಕೈ ಜೋಡಿಸಿದ ಸ್ವಚ್ಛತಾ ಆಂದೋಲನ ಪರಿವಾರದ ಮಿತ್ರರು ಕೆರೆಯ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು. ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ಸ್ವಚ್ಛಗೊಂಡ ಪರಿಸರದಲ್ಲಿ ಸಸಿಗಳನ್ನು ನೆಡಲಾಯಿತು.

ಪರಿವಾರದ ಹಿರಿಯರಾದ ವಿ. ಮುಕುಂದ, ಸುನೀಲ ಗುಮಾಸ್ತೆ, ವೈ. ಬಿ. ಪಾಟೀಲ, ಸಮಾಜಸೇವಕ ವಿನೋದಕುಮಾರ ಪಾಟವಾ, ರಘುರಾಮ ಇಬ್ರಾಹಿಂಪೂರ, ಸೋಮನಾಥ ಮೆಹರವಾಡೆ, ನಿಖಿಲ ವಂಗಿ, ಮನೋಜ ಹಬ್ಬು, ಮನೋಜ ಜೈನ್, ಪ್ರೀತಮ ಇರಕಲ್, ಪ್ರಕಾಶ ಆನೆಗುಂದಿ, ರತ್ನಾಕರ ಶೆಟ್ಟಿ, ಮೇಘಾ ಚಾಗಾಪುರಂ, ಅಶ್ವಿನಿ ಕಟ್ಟಿಮನಿ, ಶೃತಿ ಮುಂಡರಗಿ, ಪೂಜಾ ಕಟ್ಟಿಮನಿ, ಸುಧಾ ಆನೆಗುಂದಿ, ಪ್ರೀತಿ ರಾಯ್ಕರ್, ಶ್ವೇತಾ ಗುಮಟಿಮಠ, ವಿನುತಾ ಭಾಗೆವಾಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net