ಸ್ವಚ್ಛತೆ ಕಾಪಾಡಲು ಸಮಿತಿ ರಚಿಸಿ

25-msk-1
Published on

ಮಸ್ಕಿ: ಸ್ವಚ್ಛ ಭಾರತ ಮಿಷನ್, ಜಲಜೀವನ್ ಯೋಜನೆಗಳಿಂದ ಸಾರ್ವಜನಿಕರಿಗೆ ಅನುಕೂಲವಿದ್ದು, ಇದಕ್ಕೆ ಗ್ರಾಮೀಣ ಪ್ರದೇಶದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಗ್ರಾಮದ ಸ್ವಚ್ಛತೆ, ನೈರ್ಮಲ್ಯ ಕಾಪಾಡಲು ಸಮಿತಿ ರಚಿಸಬೇಕೆಂದು ಕೇಂದ್ರ ಸರ್ಕಾರದ ಅಧಿಕಾರಿಗಳಾದ ಜಗಜಿತ್ ಸಿಂಗ್ ಸೌದಿ ಮತ್ತು ದೇವೇಶ ಕುಮಾರ ಭಾರಧ್ವಾಜ ಹೇಳಿದರು.

ಗುಡದೂರು ಗ್ರಾ.ಪಂ.ಗೆ ಗುರುವಾರ ಭೇಟಿ ನೀಡಿ ವಿವಿಧ ಯೋಜನೆಗಳ ಪರಿಶೀಲನೆ ನಡೆಸಿ ಮಾತನಾಡಿದರು. ಜಲಜೀವನ್ ಮಿಷನ್, ಸ್ವಚ್ಛ ಭಾರತ ಮಿಷನ್ ಅನುಷ್ಠಾನದ ಕುರಿತು ಮಾಹಿತಿ ಸಂಗ್ರಹಿಸಿದರು. ನೀರು ನಿರ್ವಹಣೆ ಸಮಿತಿಯಿಂದ ಎಫ್‌ಟಿಕೆ ಕಿಟ್ ಮೂಲಕ ನೀರು ಪರೀಕ್ಷಿಸುವುದನ್ನು ಪರಿಶೀಲಿಸಿದರು.

ಮನೆಗಳಿಗೆ ನಳ ಸಂಪರ್ಕ, ವೈಯಕ್ತಿಕ ಶೌಚಗೃಹ, ಶಾಲೆ, ಅಂಗನವಾಡಿಗಳಲ್ಲಿ ಶೌಚಗೃಹ ನಿರ್ಮಾಣ, ಸ್ವಸಹಾಯ ಸಂಘಗಳ ರಚನೆ ಕುರಿತು ಮಾಹಿತಿ ಪಡೆದುಕೊಂಡರು. ಮೇರನಾಳ, ಗೋನಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೌಚಗೃಹ ಬಳಕೆ, ಬಿಸಿಯೂಟ, ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು.

ಪ್ರಮುಖರಾದ ವಿಜಯಲಕ್ಷ್ಮೀ, ಮಂಜುನಾಥ, ಮೌನೇಶ, ಅಜರುದ್ದೀನ್, ಗಂಗಾಧರ ಮೂರ್ತಿ, ಅಶೋಕ, ರಾಘವೇಂದ್ರ, ಬಸವರಾಜ್ ಗಲಗಿನ್, ಅನೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net