

ಉಪ್ಪಿನಂಗಡಿ: ಗಾಂಧಿ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಬಿಜೆಪಿ ಉಪ್ಪಿನಂಗಡಿ ಶಕ್ತಿಕೇಂದ್ರ ಹಾಗೂ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ವತಿಯಿಂದ ಇಲ್ಲಿನ ಹಿರೆಬಂಡಾಡಿ ಕ್ರಾಸ್ ರಸ್ತೆಯಲ್ಲಿನ ನಾಗನ ಕಟ್ಟೆ ಪರಿಸರದಿಂದ ರಾಮನಗರದವರೆಗೆ ಬುಧವಾರದಂದು ಸ್ವಚ್ಛತಾ ಅಭಿಯಾನ ನಡೆಯಿತು.
ಬಿಜೆಪಿ ಮುಖಂಡರಾದ ಧನಂಜಯ್ ನಟ್ಟಿಬೈಲ್, ಆದೇಶ್ ಶೆಟ್ಟಿ, ಪ್ರಸಾದ್ ಭಂಡಾರಿ, ವಿದ್ಯಾಧರ ಜೈನ್, ಯತೀಶ್ ಶೆಟ್ಟಿ ಕೂಟೇಲ್, ಸಚಿನ್ ಕೋಟೆ, ಶೋಭಾ ದಯಾನಂದ್, ಜಯಶ್ರೀ ಜನಾರ್ದನ್, ಉಷಾ ಮುಳಿಯ, ಉಷಾ ನಾಯ್ಕ, ವನಿತಾ, ಶರತ್ ಕೋಟೆ, ಉಮೇಶ್ ಶೆಣೈ, ಚಂದ್ರಶೇಖರ್ ಮಡಿವಾಳ್, ಲತಾ, ಮೊದಲಾದವರು ಭಾಗವಹಿಸಿದ್ದರು.