ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನ

17anr 19
ಕೊನಗವಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕೈಗೊಳ್ಳಲಾಯಿತು. ಎಚ್.ಕೆ.ಮಹೇಶ್, ರಘು, ಶಿವರಾಜ್ ಇತರರಿದ್ದರು.
Published on

ಆಯನೂರು: ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ವಿವಿಧ ದೇಗುಲಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.

ಕೋಹಳ್ಳಿ ಬಸ್ ನಿಲ್ದಾಣದಲ್ಲಿರುವ ವಿನಾಯಕ ದೇವಸ್ಥಾನ ಹಾಗೂ ಹಾರನಹಳ್ಳಿ ಮಹಾಶಕ್ತಿ ಕೇಂದ್ರದ ಕೊನಗವಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕೈಗೊಳ್ಳಲಾಯಿತು.
ಬಿಜೆಪಿ ಗ್ರಾಮಾಂತರ ರೈತ ಮೋರ್ಚಾ ಅಧ್ಯಕ್ಷ ಎಚ್.ಕೆ.ಮಹೇಶ್, ಬೂತ್ ಅಧ್ಯಕ್ಷರಾದ ರಘು, ಶಿವರಾಜ್, ರಾಜಣ್ಣ, ರಾಮ ನಾಯಕ್, ಪ್ರಮುಖರಾದ ಹುಬ್ಬಳ್ಳಿ ನಾಗರಾಜ್, ಲಕ್ಷೀ್ಮೀಕಾಂತ ಶೆಟ್ಟಿ, ಕೇಶವನ್ ನಾಯರ್, ಆಯನೂರು ಶಿವಾನಂದಪ್ಪ, ಉದಯ್ಕುಮಾರ್, ನಿಜಲಿಂಗಪ್ಪ, ಪ್ರಕಾಶ್, ನಿಜು, ವಿನೋದ, ನವೀನ್, ವೆಂಕಟೇಶ್, ಕಿರಣ್ ಕುಮಾರ್, ಬಸವರಾಜ್, ಹನುಮಂತ, ಮಹೇಶ್, ಮಂಜುನಾಥ್, ಮುರಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net