ರೇಣುಕಾಂಬಾ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ

1sor3
ಸೊರಬ ತಾಲೂಕು ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನ.
Published on

ಸೊರಬ: ಪ್ರತಿಯೊಬ್ಬರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಸರಿತಾ ತಿಳಿಸಿದರು. ತಾಲೂಕಿನ ಶ್ರೀಕ್ಷೇತ್ರ ಚಂದ್ರಗುತ್ತಿಯ ಶ್ರೀರೇಣುಕಾಂಬಾ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಥಬೀದಿ ಆವರಣದಲ್ಲಿ ಒಕ್ಕೂಟ ಸಂಘದವರು ಸ್ವಚ್ಛತಾ ಕಾರ್ಯ ನಡೆಸಿದರು. ಎ.ಡಿ.ಶ್ರೀರಾಮ್, ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕ ಪ್ರಸಾದ್, ಸದಸ್ಯರಾದ ಎಂ.ಪಿ.ರತ್ನಾಕರ್, ಕೆ.ರಾಜಶೇಖರ, ಶ್ರೀಮತಿ ಚಂದ್ರಕಾಂತ್, ಲಕ್ಷ್ಮೀ ರವಿ, ಪಿಡಿಒ ನಾರಾಯಣಮೂರ್ತಿ, ಸಿಬ್ಬಂದಿ ಮಂಜುನಾಥ್, ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net