ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ

27
Published on

ಮೈಸೂರು: ಪ್ಲಾಸ್ಟಿಕ್‌ಮುಕ್ತ ಮೈಸೂರು ಅಭಿಯಾನ, ದೇವಾಲಯ ಪರಿಸರ ಸ್ವಚ್ಛತೆ ಆಂದೋಲನದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಶ್ವ ಹಿಂದೂ ಪರಿಷತ್, ಸುಬ್ಬಣ್ಣ ಹಾಸ್ಟೆಲ್ ಹಾಗೂ ಗೀತಾ ಪರಿವಾರದ ಸ್ವಯಂ ಸೇವಕರು ಭಾನುವಾರ ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿದರು. ನೂರಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಮುಂಜಾನೆ ಆರು ಗಂಟೆಗೆ ಸ್ವಚ್ಛತಾ ಸೇವೆ ಆರಂಭಿಸಿದ ಬಳಿಕ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡಿಯ ದರ್ಶನ ಪಡೆದರು. ಸ್ಥಳೀಯ ಮಾರಾಟಗಾರರಿಗೆ ಪರಿಸರ ಸ್ನೇಹಿ ಕಾಗದದ ಚೀಲಗಳನ್ನು ವಿತರಿಸಲಾಯಿತು. ಈ ಅಭಿಯಾನವು ವಸ್ತುಗಳ ಮರುಬಳಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಮರುಬಳಕೆ ಮತ್ತು ಪ್ಲಾಸ್ಟಿಕ್ ಬಳಕೆಯ ಸಾಮೂಹಿಕ ನಿರಾಕರಣೆಯನ್ನು ಪ್ರತಿಪಾದಿಸುವ ಪ್ರಮುಖ ಸಂದೇಶಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net