

ರಾಯಚೂರು: ಅಯೋಧ್ಯೆಯಲ್ಲಿ ಜ.22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ದೇಶದ ದೇವಸ್ಥಾನಗಳ ಸ್ವಚ್ಛತೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಕೃಷ್ಣದೇವರಾಯ ಕಾಲನಿಯಲ್ಲಿರುವ ಬಿಲ್ವ ಮಂದಿರ ದೇವಸ್ಥಾನದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನ ಸಮಿತಿ ಪದಾಕಾರಿಗಳು ಮತ್ತು ಬಡಾವಣೆಯ ಜನರು ಶ್ರಮದಾನದ ಮೂಲಕ ದೇವಸ್ಥಾನದ ಪ್ರಾಕಾರ ಮತ್ತು ಆವರಣವನ್ನು ಸ್ವಚ್ಛಗೊಳಿಸಿ ಶುಭ್ರವಾಗಿರುವಂತೆ ಮಾಡಿದರು. ಜತೆಗೆ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಕಾರ್ಯವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎನ್.ಕೆ.ನಾಗರಾಜ, ಬಡಾವಣೆ ನಿವಾಸಿಗಳಾದ ಬಸನಗೌಡ, ಅಮರೇಶಪ್ಪ, ವೀರಣ್ಣ ಮುದಗಲ್, ಆರ್.ಮೋಕ್ಷರಾಜ್, ಎಚ್.ವೆಂಕಟೇಶ, ಮನೋಹರ್, ಬೂದೆಪ್ಪ, ಶರಣಪ್ಪ ಮಾಸ್ತರ್ ಉಪಸ್ಥಿತರಿದ್ದರು.