ಬಾಳೆಯಲ್ಲಿ ಸ್ವಚ್ಛತಾ ಆಭಿಯಾನ

Cleanliness campaign in balele
Published on

ಗೋಣಿಕೊಪ್ಪ:

ಬಾಳೆಲೆ ಗ್ರಾಮ ಪಂಚಾಯಿತಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು, ಶಾಲಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬಾಳೆಲೆ ಮುಖ್ಯ ರಸ್ತೆ, ಪದವಿಪೂರ್ವ ಕಾಲೇಜಿನ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಜಂಟಿಯಾಗಿ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು.

ಗ್ರಾಮಪಂಚಾಯತಿ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ, ಮಾಜಿ ಅಧ್ಯಕ್ಷರಾದ ಪೊಡಮಾಡ ಸುಕೇಶ್ ಭೀಮಯ್ಯ, ಸದಸ್ಯರಾದ ಅದೇಂಗಡ ವಿನು ಉತ್ತಪ್ಪ, ಕಾಲೇಜು ಪ್ರಾಂಶುಪಾಲ ಯನ್.ಕೆ ಪ್ರಭು, ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಪ್ರಮುಖರಾದ ಅಡ್ಡೇಂಗಡ ಅರುಣ್, ಸಜನ್, ರಾಖಿ, ಅಜಯ್ ,ಕಾವೇರಮ್ಮ, ಶೌರ್ಯ , ಪಡಿಞರಂಡ ಪ್ರಭು ಕುಮಾರ್, ಲಕ್ಷ್ಮಿ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಜಾತಾ ವಿಜಯನಾಧನ್ ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net