

ಹುಬ್ಬಳ್ಳಿ : ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ನೈಋತ್ಯ ರೈಲ್ವೆ ವತಿಯಿಂದ ಮಂಗವಾರದಂದು ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸೆ. 17 ರಿಂದ ಆರಂಭಗೊಂಡಿರುವ ಅಭಿಯಾನ, ಅಕ್ಟೋಬರ್ 1ರವರೆಗೆ ನಡೆಯಲಿದೆ. ರಾಷ್ಟ್ರವ್ಯಾಪ್ತಿ ಆಯೋಜಿಸಿರುವ ಈ ಅಭಿಯಾನದ ಅಂಗವಾಗಿ ಮಂಗಳವಾರದಂದು ರೈಲ್ ಸೌಧದ ಆವರಣದಲ್ಲಿ ಸ್ವಚ್ಛತೆ ಮತ್ತು ಪರಿಸರ ಸುಸ್ಥಿರತೆ ಉತ್ತೇಜಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ರೈಲ್ ಸೌಧದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ‘ಸ್ವಚ್ಛತಾ ಪ್ರತಿಜ್ಞೆ‘ ಬೋಧಿಸಿದರು, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆ ಕಾಪಾಡಲು ಪ್ರೋತ್ಸಾಹಿಸಿದರು.
ರೈಲು ನಿಲ್ದಾಣಗಳು, ರೈಲು, ರೈಲ್ವೆ ಕಚೇರಿಗಳು ಮತ್ತು ಸುತ್ತಲಿನ ಆವರಣದಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳು ಈ ಕಾರ್ಯಕ್ರಮ ರೈಲ್ವೆ ಸಚಿವಾಲಯ ಆರಂಭಿಸಿದೆ.
‘ಸ್ವಾಭಿಮಾನ್ ಸ್ವಚ್ಚತೆ ಸಂಸ್ಕಾರ ಸ್ವಚ್ಚತೆ‘ ಎಂಬ ಅಭಿಯಾನದ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಈ ಕಾರ್ಯಕ್ರಮವು ದೈಹಿಕ ಸ್ವಚ್ಛತೆಯನ್ನು ಮಾತ್ರವಲ್ಲದೆ ಒಬ್ಬರ ಮೌಲ್ಯಗಳ ಭಾಗವಾಗಿ ಸ್ವಚ್ಛ ಅಭ್ಯಾಸಗಳನ್ನು ಸಹ ಒತ್ತಿಹೇಳುತ್ತದೆ. ವೈಯಕ್ತಿಕ ಯೋಗಕ್ಷೇಮ ಮತ್ತು ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಗೆ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದ ಮಹತ್ವವನ್ನು ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಇದೇ ಸಂದರ್ಭದಲ್ಲಿ ಹೇಳಿದರು.
ಅಭಿಯಾನದ ಅಂಗವಾಗಿ ‘ಏಕ್ ಪೇಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಮರ) ಹೆಸರಿನಲ್ಲಿ ಮರ ನೆಡುವ ಅಭಿಯಾನವನ್ನು ಸಹ ಆಯೋಜಿಸಲಾಗಿತ್ತು.
ನೈಋತ್ಯ ರೈಲ್ವೆಯ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.