

ಕಾಸರಗೋಡು: ಕಸಮುಕ್ತ ನವಕೇರಳ ಅಭಿಯಾನ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಉತ್ತೇಜಿಸಲು ಜಿಲ್ಲೆಯ ವಿವಿಧ ಕರಾವಳಿ ಪ್ರವಾಸಿ ಕೇಂದ್ರಗಳಲ್ಲಿ ಮೂರು ದಿನ ಎಂಟು ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಅಭಿಯಾನ ಆಯೋಜಿಸಲಾಯಿತು.
ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಕಾಸರಗೋಡು, ಪ್ರವಾಸೋದ್ಯಮ ಕ್ಲಬ್, ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಯಿತ್ತಲ ಬೀಚ್‌ನಲ್ಲಿ ಕುಟುಂಬಶ್ರೀ ಸಿಡಿಸಿ ಸ್ವಯಂಸೇವಕರಿಂದ ಸ್ವಚ್ಛತಾ ಅಭಿಯಾನ ನಡೆಸಿ ಹತ್ತು ಚೀಲ ಕಸ ಸಂಗ್ರಹಿಸಲಾಯಿತು. ಜತೆಗೆ ಕೈಟ್ ಬೀಚ್ ನಿರ್ವಹಣಾ ತಂಡದಿಂದ ಬೀಚ್ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕಣ್ವತೀರ್ಥ ಬೀಚ್‌ನಲ್ಲಿ ಕುಟುಂಬಶ್ರೀ ಸಿಡಿಸಿ ಸ್ವಯಂಸೇವಕರು ಸ್ವಚ್ಛತೆ ನಡೆಸಿದರು.
ಚೆಂಬರಿಕ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಟೂರಿಸಂ ಕ್ಲಬ್ ಸ್ವಯಂಸೇವಕರು ಮತ್ತು ಕುಟುಂಬಶ್ರೀ ಸದಸ್ಯರಿಂದ ಸಂಗ್ರಹಿಸಲಾಗಿದೆ. ಜಿಲ್ಲಾ ಪಂಚಾಯಿತಿ, ಸರ್ಕಾರಿ ಕಾಲೇಜು, ಮಂಜೇಶ್ವರ ಸರ್ಕಾರಿ ಕಾಲೇಜು ಟೂರಿಸಂ ಕ್ಲಬ್ ಭಾಗವಹಿಸಿದ್ದರು.