ಪಾಲಿಕೆ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಮರಳೂರು ಕೆರೆ ದಂಡೆಯಲ್ಲಿ ಸ್ವಚ್ಛತೆ

IMG-20201125-WA0078
Published on

ತುಮಕೂರು: ಪರಿಸರ ರಕ್ಷಣಾ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಬುಧವಾರ ನಗರದ ಮರಳೂರು ಕೆರೆ ದಂಡೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾವೇಂದ್ರ ಶೆಟ್ಟಿಗಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೋಳಿ ಅಂಗಡಿ, ಆಸ್ಪತ್ರೆ, ರಿಂಗ್ ರಸ್ತೆಯಲ್ಲಿರುವ ನಿವಾಸಿಗಳು ಕೆರೆ ದಂಡೆಗೆ ತ್ಯಾಜ್ಯ ಎಸೆದಿರುವುದರಿಂದ ಈ ಪ್ರದೇಶ ಅನೈರ್ಮಲ್ಯದಿಂದ ಕೂಡಿದ್ದು, 2 ಜೆಸಿಬಿ, 3 ಟಿಪ್ಪರ್, ಸುವಾರು 30 ಪೌರ ಕಾರ್ಮಿಕರನ್ನು ಬಳಸಿ ಸುವಾರು 1 ಕಿ.ಮೀ.ನಷ್ಟು ಮರಳೂರು ಕೆರೆ ದಂಡೆಯನ್ನು ಸ್ವಚ್ಛಗೊಳಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಗರವನ್ನು ಅಂದವಾಗಿಸುವ ಹಾಗೂ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ವೈಜ್ಞಾನಿಕ ಅಂಶಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕೆಂದರಲ್ಲದೆ ಮರಳೂರು ಕೆರೆಗೆ ಒಳಚರಂಡಿ ನೀರು ಹರಿದು ಬರುತ್ತಿರುವ ಬಗ್ಗೆ ಪಾಲಿಕೆ ಗಮನಕ್ಕೆ ತರಲಾಗಿದ್ದು, ಸರಿಪಡಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹ20ರ ಆಚರಣೆ ಹಿನ್ನೆಲೆಯಲ್ಲಿ ಪ್ರತಿದಿನ ದುರ್ಬಲ, ಅಲ್ಪಸಂಖ್ಯಾತರ ವರ್ಗ, ಮಹಿಳೆಯರಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರಂತೆ ನ.25ರಂದು ಪರಿಸರ ರಕ್ಷಣಾ ದಿನ ಹಮ್ಮಿಕೊಳ್ಳಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮ ಉಲ್ಲಂಸಿದವರಿಗೆ ಅನಿರೀಕ್ಷಿತ ದಾಳಿ ನಡೆಸಿ ದಂಡ ವಿಧಿಸಲಾಗುವುದು, ನಗರದ ಹೊರ ವಲಯದಲ್ಲಿಯೂ ಪ್ಲಾಸ್ಟಿಕ್ ಬಳಕೆ ಕಂಡು ಬರುತ್ತಿರುವುದರಿಂದ ಪೊಲೀಸ್ ರಕ್ಷಣೆಯೊಂದಿಗೆ ಪರಿಸರ ನಿಯಂತ್ರಣ ಮಂಡಳಿ ಸಹಕಾರದಲ್ಲಿ ದಾಳಿ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ನಗರದ ಸ್ವಚ್ಛತೆಗಾಗಿ ಪಾಲಿಕೆಯೊಂದಿಗೆ ಎಲ್ಲ ಇಲಾಖೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಎಲ್ಲದಕ್ಕೂ ಪಾಲಿಕೆಯನ್ನು ದೂರಬಾರದು. ಹಗಲಿರುಳು ಸ್ವಚ್ಛತೆ ಕಾಪಾಡುವುದರೊಂದಿಗೆ ನಗರದ ಅಭಿವೃದ್ಧಿಗಾಗಿ ಪಾಲಿಕೆ ಶ್ರಮಿಸುತ್ತಿದೆ ಎಂದರಲ್ಲದೆ ರಾತ್ರಿ ವೇಳೆಯಲ್ಲಿ ಕಣ್ತಪ್ಪಿಸಿ ಕಸ ಎಸೆಯುವವರ ಮೇಲೆ ನಿಗಾ ಇಡಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮೇಯರ್ ಫರೀದಾ ಬೇಗಂ ತಿಳಿಸಿದರು. ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಇದ್ದರು.

5ರಿಂದ 10 ಸಾವಿರ ದಂಡ: ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ವಾಹನದ ಮೂಲಕ ಕಸ ಸಂಗ್ರಹಿಸಲಾಗುತ್ತಿದ್ದರೂ ಸಾರ್ವಜನಿಕರು ತ್ಯಾಜ್ಯವನ್ನು ಕೆರೆ ದಂಡೆಗಳಲ್ಲಿ ಎಸೆಯುತ್ತಿದ್ದಾರೆ, ಕಸ ಎಸೆಯದಂತೆ ನಿಗಾ ಇಡಲು ಪಾಲಿಕೆಯಿಂದ ತಂಡವನ್ನು ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮರಳೂರು ಕೆರೆ ದಂಡೆಯಲ್ಲಿ ಕಸ ಎಸೆಯುವುದು ಕಂಡು ಬಂದರೆ 5 ರಿಂದ 10ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಎಚ್ಚರಿಸಿದರು. ದಂಡ ವಿಧಿಸುವ ಬಗ್ಗೆ ಸಾರ್ವಜನಿಕರ ವಾಹಿತಿಗಾಗಿ ಸ್ಥಳದಲ್ಲಿ ಫಲಕ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳ ವಾಲೀಕರು ತ್ಯಾಜ್ಯವನ್ನು ಕಸ ಸಂಗ್ರಹ ವಾಹನದಲ್ಲಿಯೇ ವಿಲೇವಾರಿ ವಾಡಬೇಕು ಎಂದು ಮನವಿ ಮಾಡಿದರು.

ಸಸಿ ನೆಡುವ ಕಾರ್ಯಕ್ರಮ: ಪರಿಸರ ರಕ್ಷಣಾ ದಿನದ ಅಂಗವಾಗಿ ನಗರದ ಅವಾನಿಕೆರೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಿಡನೆಟ್ಟು ವಾತನಾಡಿದ ರಾವೇಂದ್ರ ಶೆಟ್ಟಿಗಾರ್, ನೆಡಲಾದ ಗಿಡಗಳ ಪೋಷಣೆಯನ್ನು ಅರಣ್ಯ ಇಲಾಖೆ ನಿರ್ವಹಿಸಲಿದೆ. ಕಳೆದ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಕೋರ್ಟ್ ಆವರಣ, ನ್ಯಾಯಾಧೀಶರ ವಸತಿ ಗೃಹ ಆವರಣದಲ್ಲಿ ನೆಡಲಾಗಿರುವ 147 ಔಷಧಿಯುಕ್ತ ಗಿಡಗಳು ಉತ್ತಮವಾಗಿ ಬೆಳೆಯುತ್ತಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net