

ಕೋಟ: ಇಲ್ಲಿನ ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಮಹಾಲಿಂಗೇಶ್ವರ ಹೇರಂಬ ಮಹಾಗಣಪತಿ ದೇಗುಲದ ವಾರ್ಷಿಕ ಜಾತ್ರೋತ್ಸವ ಏ.12ರಂದು ಜರುಗಲಿದ್ದು, ಈ ಹಿನ್ನೆಲೆಯಲ್ಲಿ ದೇಗುಲದ ಒಳ ಹಾಗೂ ಹೊರ ಪ್ರಾಂಗಣವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು.
ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಅಪ್ಪು ಅಟಾಕರ್ಸ್ ಸಹಯೋಗದಲ್ಲಿ 249ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಯಿತು. ದೇಗುಲ ಅಧ್ಯಕ್ಷ ಸತೀಶ್ ಕುಂದರ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಆಡಳಿತ ಟ್ರಸ್ಟಿ ಕೃಷ್ಣ ದೇವಾಡಿಗ, ಚಂದ್ರ ಹರ್ತಟ್ಟು, ದಿನೇಶ್ ಆಚಾರ್, ಸ್ಥಳೀಯರಾದ ಭಾರತಿ ವಿಷ್ಣುಮೂರ್ತಿ ಮಯ್ಯ, ರಾಜೇಂದ್ರ ಉರಾಳ, ಶಿವರಾಮ ಶೆಟ್ಟಿ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಮನೋಹರ್ ಪೂಜಾರಿ, ಕೇಶವ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.