ಚಾಮುಂಡಿಬೆಟ್ಟದ ಪಾದದ ಬಳಿ ಸ್ವಚ್ಛತಾ ಕಾರ್ಯ

chamundi hill
Published on

ಮೈಸೂರು: ಸ್ವಚ್ಛ ಭಾರತ್ ಮಿಷನ್ ಯೋಜನೆ ಮತ್ತು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಚಾಮುಂಡಿ ಬೆಟ್ಟದ ಪಾದದ ಬಳಿ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ರಕ್ಷಣಾ, ಪ್ರವಾಸೋದ್ಯಮ ರಾಜ್ಯ ಸಚಿವ ಅಜಯ್ ಭಟ್ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿ ಚಾಮುಂಡೇಶ್ವರಿ ದರ್ಶನ ಪಡೆದು ನಂತರ ಸ್ವಚ್ಛತಾ ತಂಡದವರನ್ನು ಅಭಿನಂದಿಸಿದರು. ಸ್ವಚ್ಛತಾ ಕಾರ್ಯದ ಅಂಗವಾಗಿ ಸ್ವಚ್ಛತೆಯೇ ಸೇವೆ ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬೆಟ್ಟದ ಎಲ್ಲ ಮೆಟ್ಟಲುಗಳನ್ನೂ ಶುಚಿಗೊಳಿಸಿದರು.


ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಸಹಾಯಕ ನಿರ್ದೇಶಕ ರಾಘವೇಂದ್ರ, ಕಾರ್ಯಪಾಲಕ ಇಂಜಿನಿಯರ್ ಮೃತ್ಯುಂಜಯ, ಪ್ರವಾಸೋದ್ಯಮ ಅಧಿಕಾರಿ ರಾಸೂಲ್, ಗೈಡ್ ಅಸೋಸಿಯೇಷನ್ ಚೇರ್ಮನ್ ಅಶೋಕ್ ಹಾಗೂ ರಾಜಸ್ವ ನಿರೀಕ್ಷಕ ಶಿವಪ್ರಸಾದ್, ಪ್ರೀತಿ, ವಿದ್ಯಾವರ್ಧಕ ಪದವಿ ಕಾಲೇಜಿನ ಡಾ.ಬಿ.ಎಸ್.ಶ್ರೀಹರ್ಷ, ಪ್ರೊ.ಸಿದ್ದರಾಜು, ವಿ.ರಮೇಶ್, ಮಿಲಿಟರಿ ಅಧಿಕಾರಿಯಾದ ಸುಬೇದಾರ್ ಬಲವಂತ್ ಸಿಂಗ್, 13 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net