ನೆಲ್ಯಹುದಿಕೇರಿಯಲ್ಲಿ ಸ್ವಚ್ಛತಾ ಕಾರ್ಯ

ಚಿತ್ರ 25ಎಸ್ ಡಿ ಪಿ 02m
ಈದ್ ಮೀಲಾದ್ ಪ್ರಯಕ್ತ ಸ್ವಚ್ಚತೆ ಕಾರ್ಯ ನಡೆಯಿತು.
Published on

ಸಿದ್ದಾಪುರ : ಮೊಹಮ್ಮದ್ ಪೈಗಂಬರ್ ಅವರ 1499 ಜನ್ಮದಿನದ ಪ್ರಯುಕ್ತ ನೆಲ್ಯಹುದಿಕೇರಿಯ ದಾರುನ್ನಜಾತ್ ಎಜುಕೇಷನಲ್ ಅಕಾಡೆಮಿ ಹಾಗೂ ಎಸ್‌ವೈಎಸ್‌ಎಸ್‌ಎಸ್‌ಎಫ್ ಹಾಗೂ ಮುಸ್ಲಿಂ ಜಮಾಆತ್ ನೇತೃತ್ವದಲ್ಲಿ ನೆಲ್ಯಹುದಿಕೇರಿಯಲ್ಲಿ ಬುಧವಾರ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಕಾವೇರಿ ಸೇತುವೆ ಬಳಿ ರಸ್ತೆ ಬದಿ ಗಿಡಗಂಟಿ ಕಡಿದು ಸ್ವಚ್ಛಗೊಳಿಸಿ ಸ್ಥಳಿಯ ಗ್ರಾಮ ಪಂಚಾಯಿತಿ ಸ್ವಚ್ಛ ಭಾರತ್ ವಾಹನದ ಮೂಲಕ ಕಸವನ್ನು ಸಾಗಿಸಲಾಯಿತು. ಎಸ್‌ವೈಎಸ್‌ಎಸ್‌ಎಸ್‌ಎಫ್ ಉಪಾಧ್ಯಕ್ಷ ಸೈಯದ್ ಬಾವ ಮಾತನಾಡಿ, ಈದ್ ಮಿಲಾದ್ ಆಚರಣಾ ಸಮಿತಿ 5 ದಿನಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸಲು ನಿರ್ಧರಿಸಿದ್ದು, ಸಮಿತಿ ಸದಸ್ಯರು ಗ್ರಾಮದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ನೆಲ್ಲಿಹುದಿಕೇರಿ ಎಸ್‌ವೈಎಸ್ ಅಧ್ಯಕ್ಷ ಎಂ.ಎ.ರಫೀಕ್ ಮಾತನಾಡಿ, ಸೆ.26ರಂದು ವೈದ್ಯಕೀಯ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ, ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ, ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಸೆ.27ರಂದು ಸಂಜೆ 4 ಗಂಟೆಗೆ ಧ್ವಜಾರೋಹಣ, 28ರಂದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 29ರಂದು ನೆಲ್ಲಿಹುದಿಕೇರಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಈದ್ ಸಂದೇಶ ಜಾಥಾ ನಡೆಯಲಿದೆ ಎಂದರು.

ದಾರುನ್ನಜಾತ್ ಎಜುಕೇಷನ್ ಸೆಂಟರ್‌ನ ಅಧ್ಯಕ್ಷ ಅಬ್ದುಲ್ ಮಜೀದ್, ಹಸ್ಸನ್, ಉಮ್ಮರ್, ಹಂಸ, ಮೊಹಮ್ಮದ್ ಮೊದಲಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net