

ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಕಾರ್ಯಕ್ಷೇತ್ರದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಶ್ರೀಪುರಂ ಅಯ್ಯಪ್ಪಸ್ವಾಮಿ ದೇವಾಲಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ಕಾರ್ಯಕ್ಕೆ ಚಾಲನೆ ನೀಡಿದರು.
ಯೋಜನೆಯ ಸುಂಟಿಕೊಪ್ಪ ಮಹಿಳಾ ಸ್ವಸಹಾಯ ಸಂಘಗಳಾದ ಭಾಗ್ಯಲಕ್ಷ್ಮೀ, ಅಮೂಲ್ಯ, ಸೂರ್ಯ, ಶ್ರೀಕಂಠ, ಕಸ್ತೂರಿ, ಗಂಗೋತ್ರಿ, ವನಸಿರಿ, ಅಮೃತವರ್ಷಿಣಿ, ನಕ್ಷತ್ರ, ನೂತನ ಹಾಗೂ ನಾಗದೇವತೆ ಸಂಘದ ಸದಸ್ಯರು ಗಿಡಗಂಟಿ, ಪ್ಲಾಸ್ಟಿಕ್ ಇತರ ತ್ಯಾಜ್ಯ ತೆರವು ಮಾಡಿ ದೇವಾಲಯದ ಒಳಾಂಗಣವನ್ನು ಶುಭ್ರಗೊಳಿಸಿದರು.
ಯೋಜನೆಯ ಸುಂಟಿಕೊಪ್ಪ ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ಚಿತ್ರಾ ಸುರೇಶ್, ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಚಂದ್ರ ಇತರರಿದ್ದರು.