ಕೃಷ್ಣಾ ನದಿಯಲ್ಲಿ ವಿದ್ಯಾರ್ಥಿನಿಯರಿಂದ ಸ್ವಚ್ಛತೆ ಕಾರ್ಯ

11-02-Shiva-3
ದೇವದುರ್ಗ ತಾಲೂಕಿನ ವೀರಗೋಟ ಹತ್ತಿರದ ಕೃಷ್ಣಾ ನದಿ ತೀರದಲ್ಲಿ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಎನ್‌ಎಸ್‌ಎಸ್ ಘಟಕದಿಂದ ಭಾನುವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು.
Published on

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಭಾನುವಾರ ದೇವದುರ್ಗ ತಾಲೂಕಿನ ವೀರಗೋಟ ಹತ್ತಿರವಿರುವ ಕೃಷ್ಣಾ ನದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿನಿಯರು ನದಿ ತೀರದಲ್ಲಿನ ಜನರು ವಿಸರ್ಜಿಸಿದ್ದ ಬಟ್ಟೆ, ಹಾಸಿಗೆ, ಪ್ಲಾಸ್ಟಿಕ್ ಚೀಲ, ಹೂವು, ತೆಂಗಿನಕಾಯಿ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದು ನದಿ ತೀರವನ್ನು ಸ್ವಚ್ಛಗೊಳಿಸಿದರು. ಜತೆಗೆ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ನಂತರ ದೇವಸ್ಥಾನ ಮತ್ತು ನದಿ ತೀರಕ್ಕೆ ಆಗಮಿಸಿದ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ನದಿ ತೀರದಲ್ಲಿ ಸಾಮಗ್ರಿಗಳನ್ನು ಹಾಕುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಜನರಿಗೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಕಾರಿ ಡಾ.ಸಂತೋಷಕುಮಾರ ರೇವೂರ, ಉಪನ್ಯಾಸಕ ವೆಂಕಟೇಶ ರಾಠೋಡ್ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net