ತುಳಸಿಗೇರಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

Cleaning work at Tulsigeri temple
ಬಾಗಲಕೋಟೆ ತಾಲೂಕಿನ ತುಳಸಿಗೇರಿಯ ಆಂಜನೇಯ ದೇವಸ್ಥಾನ ಆವರಣದಲ್ಲಿ ಮಂಗಳವಾರ ವಿಪ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸಂಗನಗೌಡ ಗೌಡರ, ನಿಂಗಪ್ಪ ಕೊಳಚಿ, ರಾಘವೇಂದ್ರ ನಾಗೂರ, ಶ್ರೀನಿವಾಸ ಪೂಜಾರ, ವಿನಾಯಕ ದೇಸಾಯಿ, ವಿರುಪಾಕ್ಷಿ ಅಮೃತಕರ, ಮಂಜುನಾಥ ಪಾಟೀಲ ಇತರರು ಇದ್ದರು.
Published on

ಬಾಗಲಕೋಟೆ: ಶ್ರೀರಾಮ ಮಂದಿರ ಲೋಕಾರ್ಪಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಎಲ್ಲ ದೇವಸ್ಥಾನ, ತೀರ್ಥ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ಅಭಿಯಾನಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ವಿಪ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ತುಳಸಿಗೇರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಪಿ.ಎಚ್.ಪೂಜಾರ ಮಾತನಾಡಿ, ತುಳಸಿಗೇರಿಯ ಆಂಜನೇಯ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದು, ಜ.21 ರ ವರೆಗೆ ಎಲ್ಲೆಡೆ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯಗಳು ಜರುಗಲಿವೆ. ಜ.22 ರಂದು ಪ್ರತಿ ಮನೆಯಲ್ಲಿ ರಾಮಜ್ಯೋತಿ ಬೆಳಗುವ ಮೂಲಕ ಶ್ರೀರಾಮನನ್ನು ಸ್ವಾಗತಿಸಬೇಕು ಎಂದು ಮನವಿ ಮಾಡಿದರು.

ಸಂಗನಗೌಡ ಗೌಡರ, ನಿಂಗಪ್ಪ ಕೊಳಚಿ, ರಾಘವೇಂದ್ರ ನಾಗೂರ, ಶ್ರೀನಿವಾಸ ಪೂಜಾರ, ವಿರುಪಾಕ್ಷಿ ಅಮೃತಕರ, ಮಂಜುನಾಥ ಪಾಟೀಲ, ಭೀಮಣ್ಣ ದಾಸನ್ನವರ, ಮರೆಯಪ್ಪ ಹೂಲಿಕೇರಿ, ಹನುಮಂತ ಬಾಲರಡ್ಡಿ, ಯಮನಪ್ಪ ಲಾಯನ್ನವರ, ವಿನಾಯಕ ದೇಸಾಯಿ, ಶ್ರೀನಿವಾಸ ದಳವಾಯಿ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net