ಚಿಪಗಿ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯ

SIRSI SWACHHATE
Published on

ಶಿರಸಿ: ತಾಲೂಕಿನ ಚಿಪಗಿ ಗ್ರಾಮದಲ್ಲಿ ಇರುವ ಹಿಂದು ರುದ್ರಭೂಮಿಯಲ್ಲಿ ಗಿಡ, ಗಂಟಿ, ಜಾಡುಗಳನ್ನು ತೆಗೆದು ಸ್ವಚ್ಛಗೊಳಿಸುವ ಮಹತ್ವದ ಕಾರ್ಯವನ್ನು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ಸೋಮವಾರ ಕೈಗೊಳ್ಳಲಾಯಿತು.

ಈ ಕಾರ್ಯದಿಂದ ರುದ್ರಭೂಮಿ ಸ್ವಚ್ಛವಾಗಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದು ರುದ್ರಭೂಮಿ ಬಹಳ ಪ್ರಾಮುಖ್ಯತೆ ಹೊಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಆಗಬೇಕಿವೆ. ಗ್ರಾಮಸ್ಥರ ಮತ್ತು ಸಮಾಜ ಸೇವಕರ ಅಗತ್ಯ ಇದೆ ಎಂದು ಎಂದು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net