ಇಬ್ಬಲೂರು ಮೇಲ್ಸೇತುವೆ ಸ್ವಚ್ಛತೆ

ಇಬಲುರು
Published on

ಬೆಂಗಳೂರು: ಸರ್ಜಾಪುರ ರಸ್ತೆಯ ಇಬ್ಬಲೂರು ಮೇಲ್ಸೇತುವೆಯಲ್ಲಿ ವಾಹನಸವಾರರಿಗೆ ತೊಂದರೆ ಯಾಗುತ್ತಿದ್ದ, ಮಣ್ಣು ಹಾಗೂ ಇತರೆ ತ್ಯಾಜ್ಯವನ್ನು ಪೌರಕಾರ್ವಿುಕರು ಸೋಮವಾರ ಸ್ವಚ್ಛಗೊಳಿಸಿದ್ದಾರೆ.

ಸರ್ಜಾಪುರ ರಸ್ತೆಯಲ್ಲಿ ಹಲವು ಕೈಗಾರಿಕೆಗಳಿದ್ದು, ಅಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನ ಸಂಚರಿಸುತ್ತವೆ. ಆದರೆ ಇಬ್ಬಲೂರು ಮೇಲ್ಸೇತುವೆ ಮೇಲೆ ಮಣ್ಣು, ಸಣ್ಣ ಕಲ್ಲುಗಳು, ಕಸ ಕಡ್ಡಿ, ಅಪಘಾತಕ್ಕಿಡಾದ ವಾಹನಗಳ ಗಾಜು ಮತ್ತು ಇತರೆ ಕಸ ಬಿದ್ದು ದ್ವಿಚಕ್ರವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದವು. ಹಾಗಾಗಿ ಭಾನುವಾರ ಮತ್ತು ಸೋಮವಾರ ಪೌರಕಾರ್ವಿುಕರು ಸ್ವಚ್ಛತೆ ಮಾಡಿದ್ದು, ಅಂದಾಜು 4 ಟ್ರಾ್ಯಕ್ಟರ್ ಲೋಡ್ ತ್ಯಾಜ್ಯ ಸಂಗ್ರಹಿಸಿದ್ದಾರೆ.

ಅಪಘಾತದ ದೂರುಗಳು: ಮೇಲ್ಸೇತುವೆ ಮೇಲಿದ್ದ ಮಣ್ಣು ಮತ್ತು ಇತರೆ ತ್ಯಾಜ್ಯದಿಂದ ಅನೇಕ ಬಾರಿ ದ್ವಿಚಕ್ರವಾಹನ ಸವಾರರು ಅಪಘಾತಕ್ಕೆ ಒಳಗಾ ಗಿದ್ದಾರೆ. ಹಾಗಾಗಿ ಮೇಲ್ಸೇತುವೆ ಸ್ವಚ್ಛಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಪಾಲಿಕೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಮನಗಂಡ ಪಾಲಿಕೆ ಸ್ವಚ್ಛತೆ ಕಾರ್ಯ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net