ಎನ್ನೆಸ್ಸೆಸ್‌ನಿಂದ ಸ್ವಚ್ಛತಾ ಹೀ ಸೇವಾ

Sub_NSS-1
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಕೆಎಸ್‌ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಎರಡು ಘಟಕಗಳಿಂದ ಶನಿವಾರ ಬೃಹತ್ ಸ್ವಚ್ಛತಾ ಅಭಿಯಾನ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನೂರಾರು ವಿದ್ಯಾರ್ಥಿಗಳು ಕ್ಷೇತ್ರ ನೈರ್ಮಲೀಕರಣ ಸೇವೆ ನೆರವೇರಿಸಿದರು.

ಕಾಲೇಜಿನ ಪರಿಸರದಿಂದ ಆರಂಭಿಸಿ ಬಿಲದ್ವಾರ, ಕಾಶಿಕಟ್ಟೆ, ಬೈಪಾಸ್ ರಸ್ತೆ, ಆದಿಸುಬ್ರಹ್ಮಣ್ಯ, ಪಾರ್ಕಿಂಗ್ ಸ್ಥಳ, ರಥಬೀದಿ ಮೊದಲಾದೆಡೆ ತ್ಯಾಜ್ಯಗಳನ್ನು, ಕಸಕಡ್ಡಿಗಳನ್ನು ಮತ್ತು ಪ್ಲಾಸ್ಟಿಕ್ ಬಾಟಲಿ ಹೆಕ್ಕಿ ಸ್ವಚ್ಛಗೊಳಿಸಿದರು. ಬಳಿಕ ಸಂಗ್ರಹಿತ ತ್ಯಾಜ್ಯ ಪಂಚಾಯಿತಿನ ತ್ಯಾಜ್ಯ ಘಟಕಕ್ಕೆ ರವಾನಿಸಲಾಯಿತು. ಪ್ರಾಂಶುಪಾಲ ಡಾ.ದಿನೇಶ ಪಿ.ಟಿ, ಐಕ್ಯೂಎಸಿ ಸಂಯೋಜಕಿ ಲತಾ ಬಿ.ಟಿ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಮೋನಪ್ಪ ಡಿ.ಸಹಕರಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಆರತಿ ಕೆ.ಹಾಗೂ ಸುವಿತ್ರಾ ಕುಮಾರಿ.ಎ, ಎರಡು ಘಟಕಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net