ಮಧೂರು ಶ್ರಮದಾನದಲ್ಲಿ ಕೈಜೋಡಿಸಿದ ವಿದ್ಯಾರ್ಥಿಗಳು

New Project (1)
Published on

ಕಾಸರಗೋಡು: ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಶ್ರಮದಾನದ ಮೂಲಕ ಕೆಲಸ ನಿರ್ವಹಿಸಲು ದಿನ ಕಳೆದಂತೆ ಹಲವಾರು ಸ್ವಯಂಸೇವಕರು ಆಗಮಿಸುತ್ತಿದ್ದು, ಸೋಮವಾರ ತಲಪ್ಪಾಡಿಯ ಶ್ರೀ ಶಾರದಾ ವಿದ್ಯಾಲಯದ 60ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಕರಸೇವೆಯಲ್ಲಿ ಪಾಲ್ಗೊಂಡಿದ್ದರು.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಅಂತಿಮ ಹಂತದ ಕೆಲಸ, ಶುಚಿತ್ವ, ಪೇಂಟಿಂಗ್, ಸಾರಣೆ, ಸಾಮಗ್ರಿ ಜೋಡಣೆ ಸೇರಿದಂತೆ ವಿವಿಧ ಕೆಲಸಗಳಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿದರು.

ಬ್ರಹ್ಮಕಲಶೋತ್ಸವ ಅಂಗವಾಗಿ ನಿರ್ಮಿಸಲಾದ ಉಗ್ರಾಣದಲ್ಲಿ ಸೋಮವಾರ ಉಗ್ರಾಣ ಪೂಜೆ, ಹೋಮ ನಡೆಯಿತು. ತಂತ್ರಿ ದೇರೆಬೈಲು ಡಾ.ಶಿವಪ್ರಸಾದ ತಂತ್ರಿ ಪೂಜೆ ನೆರವೇರಿಸಿದರು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ಈಗಾಗಲೇ ಉಗ್ರಾಣಕ್ಕೆ ಸುವಸ್ತುಗಳು ಹರಿದು ಬರಲಾರಂಭಿಸಿದ್ದು, ಮಾಣಿಲಶ್ರೀ ಅಕ್ಕಿ ಚೀಲಗಳನ್ನು ಸ್ವತಃ ತಲೆಮೇಲೆ ಹೊತ್ತುಕೊಂಡು ಉಗ್ರಾಣಕ್ಕೆ ತಲುಪಿಸಿದರು. ದೇವಸ್ಥಾನದಲ್ಲಿ ನಡೆಯುತ್ತಿರುವ ಕೆಲಸಕ್ಕೆ ಮಾರ್ಗದರ್ಶನ ನೀಡುವುದರ ಜತೆಗೆ ಸ್ವತಃ ಕೆಲಸ ನಿರ್ವಹಿಸುವ ಮೂಲಕ ಮಾಣಿಲಶ್ರೀ ಸ್ವಯಂಸೇವಕರಿಗೆ ಪ್ರೇರಣೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net