ಕುಮಾರಧಾರಾ ಕಿಂಡಿ ಅಣೆಕಟ್ಟೆ ಸ್ವಚ್ಛತೆ

Sub_Dam Cleaning
Published on

ಸುಬ್ರಹ್ಮಣ್ಯ: ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ ಸ್ನಾನಘಟ್ಟ ಬಳಿಯ ಕಿಂಡಿ ಆಣಿಕಟ್ಟಿನಲ್ಲಿ ಸಿಲುಕಿಕೊಂಡ ಮರ, ಕಸ, ಕಡ್ಡಿ, ಕಲ್ಲುಗಳನ್ನು ತೆರವುಗೊಳಿಸಲಾಯಿತು.

ರವಿ ಕಕ್ಕೆಪದವು ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್‌ನ ಸುಮಾರು 40 ಸ್ವಯಂಸೇವಕರು ಟ್ರಸ್ಟ್‌ನ ಸಂಸ್ಥಾಪಕ ಡಾ.ರವಿಕಕ್ಕೆಪದವು ನೇತೃತ್ವದಲ್ಲಿ ಭಾನುವಾರ ಅಣೆಕಟ್ಟು ಸ್ವಚ್ಛಗೊಳಿಸಿದರು. ಕುಮಾರಧಾರಾ ನದಿಯ ನೀರಿಗೆ ಇಳಿದು ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೃಹದಾಕಾರದ ದಿಮ್ಮಿಗಳನ್ನು ತೆರವುಗೊಳಿಸಿ ತೀರಕ್ಕೆ ಸಾಗಿಸಲಾಯಿತು. ಅಲ್ಲದೆ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್, ಬಟ್ಟೆ, ಇತ್ಯಾದಿಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.

ನಾವು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಮಾಡುತ್ತಾ ಬಂದಿದ್ದೇವೆ. ವಾಹನ ಪಾರ್ಕಿಂಗ್ ಸ್ಥಳ, ರಸ್ತೆಯ ಬದಿಗಳಲ್ಲಿನ ಕಸ-ಕಡ್ಡಿಗಳು, ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿದ್ದೇವೆ. ಈ ರೀತಿ ಎಲ್ಲೆಡೆ ಸ್ವಚ್ಛತೆ ನಡೆದರೆ ಆರೋಗ್ಯದೊಂದಿಗೆ ಉತ್ತಮ ಜೀವನ ನಡೆಸಬಹುದು. - ಡಾ.ರವಿ ಕಕ್ಕೆಪದವು, ತಂಡದ ಮುಖ್ಯಸ್ಥ https://www.vijayavani.net/comprehensive-award-for-keuru-kps https://www.vijayavani.net/extra-bus-to-nettana

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net