ಲಾರಿಯಡಿ ಸಿಲುಕಿ ಕ್ಲೀನರ್ ಸಾವು

crime
Published on

ಹುಬ್ಬಳ್ಳಿ: ಟೈರ್ ತಪಾಸಣೆ ಬಳಿಕ ಕ್ಲೀನರ್ ವಾಹನ ಹತ್ತುವ ವೇಳೆ ಚಾಲಕನ ಅಜಾಗರೂಕತೆಯಿಂದ ವಾಹನ ಹರಿದು ಕ್ಲೀನರ್ ಮೃತಪಟ್ಟ ಘಟನೆ
ತಾಲೂಕಿನ ಅದರಗುಂಚಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದೆ.
ಜೇವರ್ಗಿ ತಾಲೂಕು ಮಂದೆವಾಲ ಗ್ರಾಮದ ಮಲ್ಲಣ್ಣ ಶರಣಗೌಡ ಮಾಲಿಪಾಟೀಲ (36) ಮೃತರು. ಶುಕ್ರವಾರ ಸಂಜೆ ರವೀಂದ್ರ ಎಂಬ ಲಾರಿ ಚಾಲಕನು ವಾಹನ ನಿಲ್ಲಿಸಿದ್ದಾಗ ಮಲ್ಲಣ್ಣ ಟೈರ್ ಚೆಕ್ ಮಾಡಿ ಹತ್ತುತ್ತಿದ್ದಾಗ ಒಮ್ಮೇಲೆ ವಾಹನ ಚಲಾಯಿಸಿದ್ದಾರೆ. ಈ ವೇಳೆ ಕ್ಲೀನರ್ ಕೆಳಗೆ ಬಿದ್ದಾಗ ಲಾರಿ ಚಕ್ರಗಳಡಿ ಸಿಲುಕಿ ಗಂಭೀರ ಗಾಯಗೊಂಡಿದ್ದಾನೆ. ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಚಿಕಿತ್ಸೆಗೆ ಸ್ಪಂದಿಸದೆ ಕ್ಲೀನರ್ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net