

ಜಿ.ನಾಗರಾಜ್ ಬೂದಿಕೋಟೆ
ಶುದ್ಧ ನೀರಿನ ಟಕ ಹಾಳಾಗಿ ಐದಾರು ತಿಂಗಳು ಕಳೆದರೂ ದುರಸ್ತಿ ಭಾಗ್ಯವಿಲ್ಲದೆ ಮುಸ್ಟ್ರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ್ಲೋರೈಡ್ ನೀರು ಕುಡಿಯುವ ದೌರ್ಭಾಗ್ಯ ಎದುರಾಗಿದೆ.
ಸರ್ಕಾರ ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಟನಗಳನ್ನು ಅಳವಡಿಸಿದೆ. ಆದರೆ ಅವುಗಳು ಕೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿ ಕಾಣದ ಸಂಬಂಧಪಟ್ಟ ಇಲಾಖೆಯವರು ರ್ನಿಲಕ್ಷ$್ಯದಿಂದ ಮತ್ತೆ ಶದ್ಧವಲ್ಲದ ನೀರು ಕುಡಿಯುವಂತಾಗಿದೆ. ತಾಲೂಕಿನ ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಮುಸ್ಟ್ರಹಳ್ಳಿ ಗ್ರಾಮವೇ ಸಾ. ಶುದ್ಧ ಕುಡಿಯುವ ನೀರಿನ ಟಕ ಹಾಳಾಗಿದ್ದರಿಂದ ಗ್ರಾಮಸ್ಥರು ನೀರಿಗಾಗಿ ಕಿಮೀಗಟ್ಟಲೆ ಅಲೆಯುವಂತಾಗಿದೆ.
ಗ್ರಾಮದ ಬೋರ್ವೆಲ್ ನೀರಿನಲ್ಲಿ ್ಲೋರೈಡ್ ಅಂಶ ಅಧಿಕವಾಗಿದ್ದು, ಜನರು ನೀರು ಕುಡಿದು ಹಲವು ಕಾಯಿಲೆಗಳಿಗೆ ತುತ್ತಾಗಿ ನಿತ್ಯ ಒಂದಲ್ಲ ಒಂದು ಅನಾರೋಗ್ಯಕ್ಕೆ ಸಿಲುಕಿ ಪರದಾಡುವಂತಾಗಿದೆ. ಪ್ಲೋರೈಡ್ ಅಂಶ ಲಭ್ಯವಿರುವ ನೀರನ್ನು ಕುಡಿದವರ ಹಲ್ಲು ಮತ್ತು ಮೂಳೆಗಳು ಸವೆದು ನರಕಯಾತನೆ ಅನುಭವಿಸುವಂತಾಗಿದೆ. ಅನಾರೋಗ್ಯದ ಸಮಸ್ಯೆ ಹೋಗಲಾಡಿಸಲು ಸರ್ಕಾರ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿ ಗ್ರಾಮದಲ್ಲಿ ಶುದ್ಧ ನೀರಿನ ಟಕವನ್ನು ಅಳವಡಿಸಿತ್ತು. ಟಕವು ಪ್ರಾರಂಭದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಯಂತ್ರಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದರು. ಇದೀಗ ಯಂತ್ರಗಳು ಕೆಟ್ಟು ತುಕ್ಕು ಹಿಡಿಯುವಂತಾಗಿದೆ.
ಇದರ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ದೂರು ನೀಡಿದರೆ ನಮ್ಮ ವ್ಯಾಪ್ತಿಗೆ ಬರಲ್ಲ, ಗುತ್ತಿಗೆ ಪಡೆದವರು ನಿರ್ವಹಣೆ ಮಾಡುತ್ತಿದ್ದು, ದುರಸ್ತಿ ಸಹ ಅವರೇ ಮಾಡಬೇಕಿದೆ ಎನ್ನುತ್ತಾರೆ. ಜಿಪಂ ಇಲಾಖೆಯ ಎಇಇ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ ಎಂದು
ಗ್ರಾಮಸ್ಥರು ಆರೋಪಿಸಿದ್ದಾರೆ.
"ಕಳೆದ ಐದಾರು ತಿಂಗಳ ಹಿಂದೆ ಗ್ರಾಮದ ಶುದ್ಧ ಕುಡಿಯುವ ನೀರಿನ ಟಕ ಕೆಟ್ಟು ನಿಂತಿದ್ದು, ಸರಿಪಡಿಸಲು ಯಾರೂ ಸಹ ಮುಂದಾಗಲಿಲ್ಲ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಪ್ರಯೋಜನವಾಗದೆ ಗ್ರಾಮಸ್ಥರು ಪ್ಲೋರೈಡ್ ನೀರನ್ನೆ ಕುಡಿಯುವ ಅನಿವಾರ್ಯ ಎದುರಾಗಿದೆ."
- ಶಾಂತಮ್ಮ ಮುಸ್ಟ್ರಹಳ್ಳಿ, ಗ್ರಾಮಸ್ಥೆ
"ಶುದ್ಧ ಕುಡಿಯುವ ನೀರಿನ ಟಕವನ್ನು ಗುತ್ತಿಗೆದಾರರೇ ನಿರ್ವಹಣೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಪಂಚಾಯಿತಿಗೆ ಹಣ ಹಸ್ತಾಂತರ ಮಾಡದ ಕಾರಣ ಕೆಟ್ಟು ನಿಂತಿರುವ ಟಕವನ್ನು ಅವರೇ ಸರಿಪಡಿಸಬೇಕು. ಟಕವನ್ನು ಸರಿಪಡಿಸಲು ಲಾಂತರ ರೂ.ಗಳು ರ್ಖಚಾಗಲಿದ್ದು, ಸರಿಪಡಿಸಲು ಅನುದಾನವಿಲ್ಲ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಟಕ ಸರಿಪಡಿಸಲಾಗುತ್ತದೆ."
- ಮಂಜುಳಾ ಜಯಪ್ಪ, ದೋಣಿಮಡಗು ಗ್ರಾಪಂ ಅಧ್ಯೆ