ಶುದ್ಧ ನೀರು ಪೂರೈಸಲು ಅಗತ್ಯ ಕ್ರಮ

25 SND 05
ತುರ್ವಿಹಾಳ ಹೊರ ವಲಯದಲ್ಲಿರುವ ಸಿಂಧನೂರು ನಗರದ ಕುಡಿವ ನೀರಿನ ಕೆರೆ ವಿಸ್ತರಣೆ ಕಾಮಗಾರಿಗೆ ಶಾಸಕ ಹಂಪನಗೌಡ ಬಾದರ್ಲಿ ಭೂಮಿಪೂಜೆ ನೆರವೇರಿಸಿದರು. ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ಪೌರಾಯುಕ್ತ ಪಾಂಡುರಂಗ ಇಟಗಿ, ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ, ಶಬ್ಬೀರ್ ನಾಯಕ ಇದ್ದರು.
Published on

ಸಿಂಧನೂರು: ತುರ್ವಿಹಾಳ ಬಳಿಯ ಕುಡಿವ ನೀರಿನ ಕೆರೆ ವಿಸ್ತರಿಸಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಿಕೊಳ್ಳಬಹುದಾಗಿದ್ದು, ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತುರ್ವಿಹಾಳ ಹೊರ ವಲಯದ ನಗರದ ಕುಡಿವ ನೀರಿನ ಕೆರೆ ವಿಸ್ತರಣೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ನಗರದ ಜನತೆಗೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಆಗಬಾರದೆಂದು ಕೆರೆ ವಿಸ್ತರಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ.

ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ನೀರಿನ ಸಮಸ್ಯೆ ಆಗದಂತೆ ಪೂರ್ವ ತಯಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿಯೇ ಕೆರೆ ತುಂಬಿಸಿಕೊಂಡಿಲ್ಲ. ಇದನ್ನು ಕೆಲವರು ತಪ್ಪಾಗಿ ಭಾವಿಸಿದ್ದರು. ಸಿಂಧನೂರಿನ ಜನತೆಗೆ ಶುದ್ಧ ಸಮರ್ಪಕ ನೀರು ಕೊಡಲು ಬದ್ಧರಾಗಿದ್ದೇವೆ ಎಂದರು. ಸದಸ್ಯರಾದ ತಿಮ್ಮಯ್ಯ ಭಂಗಿ, ಹುಸೇನಬೀ, ಬಡೇಬೀ, ನಿಸ್ಸಾರ ಖಾನ್, ಸುರೇಶ ಜಾಧವ್, ರಾಜು ದತ್ತುರಾವ, ಉಮೇಶ ಗೋಮರ್ಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net