ಎಲ್ಲ ಗ್ರಾಮಗಳಿಗೂ ಶುದ್ಧ ನೀರಿನ ವ್ಯವಸ್ಥೆ

2 MBL 4
Published on

ಮುಳಬಾಗಿಲು: ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಮನೆ ಮನೆಗೆ ಗಂಗೆ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ತಾಲೂಕಿನ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ತಿಳಿಸಿದರು.

ತಾಲೂಕಿನ ದೇವರಾಯಸಮುದ್ರ ಪಂಚಾಯಿತಿ ಕಮ್ಮದಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶನಿವಾರ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​ ಸರ್ಕಾರ ಮಲತಾಯಿ ಧೋರಣೆಯಿಂದ ಬಿಜೆಪಿ ಮತ್ತು ಜೆಡಿಎಸ್​ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ಸರಿಯಾಗಿ ನೀಡದೆ ತಾರತಮ್ಯ ಮಾಡುತ್ತಿರುವುದರಿಂದ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನೆಲೆಯಾಗುತ್ತಿದೆ. ಕೇಂದ್ರ ಸರ್ಕಾರದಿಂದ ಬರುವ ವಿವಿಧ ಯೋಜನೆಗಳ ಅನುದಾನಗಳ ಜತೆಗೆ ಶಾಸಕರ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿಲ್ಲದಂತೆ ಮಾಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿಗಳು ಇರುವುದು ಗ್ರಾಮಗಳ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲು ಎಂಬುದನ್ನು ಮರೆತು ಕಾರ್ಯನಿರ್ವಹಿಸಲಾಗುತ್ತಿದೆ. ಹಳ್ಳಿಗಳಲ್ಲಿ ಚರಂಡಿಗಳ ಸ್ವಚ್ಛ ಮಾಡದೆ ಅನೈರ್ಮಲ್ಯ ತಾಂಡವಾಡುತ್ತಿದೆ. ರೋಗ ರುಜಿನಗಳು ಉದ್ಭವವಾಗುವುದಕ್ಕಿಂತ ಮುಂಚೆ ಎಲ್ಲ ಚರಂಡಿಗಳನ್ನು ಪಿಡಿಒಗಳು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ತಾಪಂ ಇಒ ಡಾ.ಕೆ.ಸರ್ವೇಶ್​, ಪಿಡಿಒ ಎಸ್​.ರಮೇಶ್​, ದೇವರಾಯ ಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷೆ ಶ್ರೀದೇವಿ ನಾರಾಯಣಸ್ವಾಮಿ, ಡಿಸಿಸಿ ನಿರ್ದೇಶಕ ವಿ.ರಘುಪತಿ ರೆಡ್ಡಿ, ಕೋಮಲ್​ ನಿರ್ದೇಶಕ ಬಿ.ವಿ.ಸಾಮೇಗೌಡ, ಜೆಡಿಎಸ್​ ಮುಖಂಡರಾದ ಯಡಹಳ್ಳಿ ವೈ. ಸೋಮಶೇಖರ್​, ಬಂಡಹಳ್ಳಿ ಲಕ್ಷಿ$್ಮ ನಾರಾಯಣ, ಕೀಲುಹೊಳಲಿ ಚೆಂಗಲರಾಯಪ್ಪ, ಹರೀಶ್​, ಕಮ್ಮದಟ್ಟಿ ಮುರುಳಿ, ಕಾಮನೂರು ಮನುಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net