ರೋಟರಿ ಕ್ಲಬ್​ನಿಂದ ಶುದ್ಧ ನೀರಿನ ವ್ಯವಸ್ಥೆ

Clean water system by Rotary Club
ವಿಜಯಪುರದ ದಿವಟಗೇರಿ ಗಲ್ಲಿಯ ರಾಯರ ಮಠಕ್ಕೆ ರೋಟರಿ ಕ್ಲಬ್​ ವತಿಯಿಂದ ಕುಡಿಯುವ ನೀರಿನ ಆರ್​ಒ ಪ್ಲಾಂಟ್​ ವಿತರಿಸಲಾಯಿತು. ನಾಸೀರ ಬೋರಸನವಾಲಾ, ಮಲ್ಲು ಕಲಾದಗಿ, ವೆಂಕಟೇಶ ಗುಡಿ, ಗೋವಿಂದ ದೇಶಪಾಂಡೆ ಮತ್ತಿತರರಿದ್ದಾರೆ.
Published on

ವಿಜಯಪುರ: ರೋಟರಿ ಕ್ಲಬ್​ ವತಿಯಿಂದ ನಿರಂತರವಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ದಿವಟಗೇರಿ ಗಲ್ಲಿಯ ರಾಯರ ಮಠಕ್ಕೆ ಆರ್​ಒ ವಾಟರ್​ ಪ್ಲಾಂಟ್​ ವಿತರಿಸಲಾಗಿದೆ ಎಂದು ರೋಟರಿ ಕ್ಲಬ್​ 3170ರ ಪ್ರಾಂತದ ಗವರ್ನರ್​ ನಾಸೀರ ಬೋರಸನವಾಲಾ ಹೇಳಿದರು.

ನಗರದ ದಿವಟಗೇರಿಗಲ್ಲಿಯ ರಾಯರ ಮಠದಲ್ಲಿ ರೋಟರಿ ಕ್ಲಬ್​ ಉತ್ತರ ವಲಯದ ಶಾಖೆಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಆರ್​ಒ ವಾಟರ್​ ಟ್ಯಾಂಕ್​ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ, ಇದರ ಜೊತೆಗೆ ಭೂತನಾಳ ಕೆರೆ ಬಳಿಯ ಗೋ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್​ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.

ರೋಟರಿ ಕ್ಲಬ್​ನ ಸಹ ಅಧ್ಯಕ್ಷ ಮಲ್ಲು ಕಲಾದಗಿ ಮಾತನಾಡಿ, ನಮಗೆ ಸಮಾಜ ಏನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.

ಚಾರ್ಟಟ್​ ಅಕೌಂಟೆಂಟ್​ ಡಿ.ಎಸ್​. ಪಾಟೀಲ, ರೋಟರಿ ಕ್ಲಬ್​ನ ಎ.ಜಿ. ಚಿದಾನಂದ ಸಿದ್ದಾಪುರ ಮಠ, ರಾಜ ಶಹಾ, ವೆಂಕಟೇಶ ಗುಡಿ, ಸನ್ನಿ ಖಾಸನಿಸ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net