ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಿ

SRIRAM
Published on

ನರೇಗಲ್ಲ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ದೇವಸ್ಥಾನಗಳನ್ನು ಜ. 11ರಿಂದ 22ರವರೆಗೆ ಸ್ವಚ್ಛಗೊಳಿಸಿ ವಿಶೇಷ ಪೂಜೆ ನೆರವೇರಿಸಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ವಿಶ್ವ ಹಿಂದು ಪರಿಷತ್, ಬಜರಂಗದಳ, ಆರ್‌ಎಸ್‌ಎಸ್ ವತಿಯಿಂದ ಅಬ್ಬಿಗೇರಿ ಗ್ರಾಮದಲ್ಲಿ ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ದೇಶಾದ್ಯಂತ ಎಲ್ಲ ಜನರಿಗೆ ಪವಿತ್ರ ಮಂತ್ರಾಕ್ಷತೆ ವಿತರಿಸಲು ರಾಮಜನ್ಮ ಭೂಮಿ ಟ್ರಸ್ಟ್ ಉದ್ದೇಶಿಸಿದೆ. ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸುತ್ತಿದ್ದಾರೆ. ಜ. 22ರಂದು ರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು ಅಂದು ಲೋಕ ಕಲ್ಯಾಣಕ್ಕೆ ಸಂಕಲ್ಪ ಮಾಡಬೇಕು ಎಂದರು.

ಉಮೇಶ ಮಲ್ಲಾಪುರ, ನೀಲಪ್ಪ ಗುರಿಕಾರ, ಬಸವರಾಜ ವಿರಾಪುರ, ಸಂಗನಗೌಡ ಚನ್ನಪಗೌಡರ, ಕುಬ್ಬಣ್ಣ ಕಾಳಗಿ, ಭರಮಪ್ಪ ಹನುಮನಾಳ, ಶರಣಪ್ಪ ಕಿಟಗೇರಿ, ಕಳಕಪ್ಪ ಬಿಲ್ಲರ, ಹನಮಂತಪ್ಪ ಬೇಲೇರಿ, ಈಶಪ್ಪ ನಿರಲೂಟಿ, ಶರಣಪ್ಪ ಹರ್ಲಾಪುರ, ಸುರೇಶ ನಾಯ್ಕರ, ದೇವಪ್ಪ ಜಂಟ್ಲಿ, ಶಂಕರ ಇಟಗಿ, ನೀಲಪ್ಪ ದ್ವಾಸಲ, ರೇಣವ್ವ ಹಳ್ಳಿ, ರೇಖಾ ವೀರಾಪುರ, ಸಚಿನ ಪಾಟೀಲ, ಶಶಿಧರ ನಿಡಗುಂದಿ, ಸಂಗಪ್ಪ ನಿರಲೂಟಿ, ರವಿ ಯತ್ನಟ್ಟಿ, ಅಪ್ಪಣ್ಣ ಪಾಟೀಲ, ಸಂಗು ವೀರಾಪುರ, ವೀರನಗೌಡ ಗುಜಮಾಗಡಿ, ಸತೀಶ ಸಿದ್ನೇಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net