ಶಾಲಾ ಮಕ್ಕಳಿಂದ ಶೌಚ ಸ್ವಚ್ಛ ಖಂಡನೀಯ

protest
Published on

ಮೈಸೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಾಲಕರಿಂದ ಶೌಚ ಸ್ವಚ್ಛ ಮಾಡಿಸಿರುವುದನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸಿದ್ದರಾಜು ಖಂಡಿಸಿದ್ದಾರೆ.

ಶಾಲೆಯ ಶೌಚಗೃಹ ಸ್ವಚ್ಛತೆ ಮಾಡಲು ಸಿಬ್ಬಂದಿ ಇರುತ್ತಾರೆ. ಆದರೆ, ಮಕ್ಕಳಿಂದ ಮಾಡಿಸಿರುವುದು ಅಮಾನವೀಯ. ಮಕ್ಕಳು ಶಾಲೆಗೆ ಹೋಗುವುದು ವಿದ್ಯಾಭ್ಯಾಸಕ್ಕೆ, ಶೌಚಗೃಹ ಸ್ವಚ್ಛತೆ ಮಾಡಲು ಅಲ್ಲ. ಹೀಗಾಗಿ ಮಕ್ಕಳಿಂದ ಈ ಕೆಲಸ ಮಾಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಂಸದ ಪ್ರತಾಪಸಿಂಹ ಅವರಿಂದ ಪಾಸ್ ಪಡೆದ ಮನೋರಂಜನ್ ಮತ್ತು ಆತನ ಸ್ನೇಹಿತರು ಸಂಸತ್ತಿನಲ್ಲಿ ಹೊಗೆ ಬಾಂಬ್ ಹಾಕಿ ಭದ್ರತಾ ಲೋಪಕ್ಕೆ ಕಾರಣವಾಗಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ವಕ್ತಾರ ರವಿಪ್ರಕಾಶ್, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ರಾಮಸ್ವಾಮಿ, ರೇವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net