ಆದಷ್ಟು ಬೇಗ ಚರಂಡಿ ಕ್ಲೀನ್ ಮಾಡಿ: ಸ್ನೇಹಲ್ ಸುಧಾಕರ್ ಲೋಖಂಡೆ

16 HHR P 05 (2)
ಅರಹತೊಳಲು ಗ್ರಾಪಂಗೆ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ದಿಢೀರ್ ಭೇಟಿ ನೀಡಿ ನರೇಗಾ ಯೋಜನಾ ಕಾಮಗಾರಿ ಕುರಿತು ಪರಿಶೀಲಿಸಿದರು. ಲಕ್ಷಿ÷್ಮÃ ಬಾಯಿ, ಚೇತನ್, ರಂಗಸ್ವಾಮಿ ಇತರರಿದ್ದರು.
Published on

ಹೊಳೆಹೊನ್ನೂರು: ಸಮೀಪದ ಅರಹತೊಳಲು ಗ್ರಾಪಂಗೆ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಗುರುವಾರ ದಿಢೀರ್ ಭೇಟಿ ನೀಡಿ ಗ್ರಾಮದ ಕೆಲ ಬೀದಿಗಳಲ್ಲಿ ಸಂಚಾರಿ ಪರಿಶೀಲನೆ ನಡೆಸಿದರು. ಗ್ರಾಮದ ಬೀದಿಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳು ಮತ್ತು ಚರಂಡಿಗಳನ್ನು ಪರಿಶೀಲಿಸಿದರು. ಚರಂಡಿಯಲ್ಲಿ ಕೆಲವೆಡೆ ಕೊಳಚೆ ನೀರು ನಿಂತಿರುವುದನ್ನು ಗಮನಿಸಿ ಗ್ರಾಪಂನಿAದ ಆದಷ್ಟು ಬೇಗ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲು ಸ್ಥಳದಲ್ಲಿದ್ದ ಪಿಡಿಒ ಮತ್ತು ಗ್ರಾಪಂ ಸದಸ್ಯರಿಗೆ ತಿಳಿಸಿದರು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸಬೇಕು. ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಲಕ್ಷಿ÷್ಮÃಬಾಯಿ, ತಾಪಂ ಸಹಾಯಕ ನಿರ್ದೇಶಕ ಚೇತನ್, ರಂಗಸ್ವಾಮಿ, ಗಂಗಪ್ಪ, ಪಿಡಿಒ ಜಿ.ಅನಿತಾ ಇತರರಿದ್ದರು.
(೧೬ ಎಚ್ ಎಚ್ ಆರ್ ಪಿ ೦೫)
ಅರಹತೊಳಲು ಗ್ರಾಪಂಗೆ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ದಿಢೀರ್ ಭೇಟಿ ನೀಡಿ ನರೇಗಾ ಯೋಜನಾ ಕಾಮಗಾರಿ ಕುರಿತು ಪರಿಶೀಲಿಸಿದರು. ಲಕ್ಷಿ÷್ಮÃ ಬಾಯಿ, ಚೇತನ್, ರಂಗಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net