ದೇವಸ್ಥಾನ ಸ್ವಚ್ಛಗೊಳಿಸಿ ಭಕ್ತರ ಪ್ರವೇಶಕ್ಕೆ ಅಣಿ

7adarshkdga8
Published on

ಕುಶಾಲನಗರ: ಜೂ.8ರಿಂದ ಎಲ್ಲ ಪ್ರಾರ್ಥನಾ ಮಂದಿರಗಳು ಭಕ್ತರಿಗೆ ಮುಕ್ತವಾಗಲಿರುವ ಹಿನ್ನೆಲೆ ಕುಶಾಲನಗರದ ಎಲ್ಲ ದೇವಸ್ಥಾನಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಭಾನುವಾರ ಸ್ವಚ್ಛಗೊಳಿಸಲಾಯಿತು.

ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ. ನಾಗೇಶ್ ಮಾತನಾಡಿ, ಸರ್ಕಾರದ ನೀತಿ ನಿಯಮಗಳನ್ನು ಶಿಸ್ತುಬದ್ಧವಾಗಿ ಪಾಲಿಸುತ್ತೇವೆ. ಜೂ.8ರಂದು ಕನ್ಯಕಾಪರಮೇಶ್ವರಿ ದೇವಿಗೆ ವಿಶೇಷ ರುದ್ರಾಭಿಷೇಕ ಮಾಡಲಾಗುವುದು. ಪರಸ್ಪರ ಅಂತರ ಕಾಯ್ದುಕೊಂಡು 30 ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು. 10 ವರ್ಷಕ್ಕಿಂತ ಚಿಕ್ಕವರು ಮತ್ತು 65 ವರ್ಷ ಮೇಲ್ಪಟ್ಟ ಯಾರಿಗೂ ದೇವಸ್ಥಾನಕ್ಕೆ ಪ್ರವೇಶ ನೀಡುವುದಿಲ್ಲ ಎಂದರು.

ಜೂ.11ರಂದು ಕುಶಾಲನಗರ ದೇವಾಲಯಗಳ ಒಕ್ಕೂಟದ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಯಾವ ರೀತಿ ಮುಂಜಾಗ್ರತೆ ವಹಿಸಿ ದೇವಸ್ಥಾನಗಳನ್ನು ತೆರೆಯಬೇಕು ಎನ್ನುವ ನಿರ್ಧಾರ ಮಾಡಲಾಗುತ್ತದೆ. 2 ತಿಂಗಳ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಸಿಗುತ್ತಿರುವುದರಿಂದ ಭಕ್ತರ ಪ್ರತಿಕ್ರಿಯೆ ನೋಡಿಕೊಂಡು ಅಗತ್ಯ ಕ್ರಮ ವಹಿಸಿ ತೆಗೆಯುವ ನಿರ್ಧಾರ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net