ಸ್ವಚ್ಛತಾ ಅಭಿಯಾನ ಯಶಸ್ಸಿಗೆ ಮನವಿ

IMG_20250228_183503_740-1.jpg
Published on

ಹುಬ್ಬಳ್ಳಿ: ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ಮಾ. 2ರಂದು ಬೆಳಗ್ಗೆ 7ಕ್ಕೆ ಏರ್ಪಡಿಸಿರುವ ಸ್ವಚ್ಛತಾ ಅಭಿಯಾನ ಅಂಗವಾಗಿ ಬಿಜೆಪಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಶುಕ್ರವಾರ ಅಕ್ಷಯ ಪಾರ್ಕ್ ನಲ್ಲಿ ಪೂರ್ವಭಾವಿ ಸಭೆ ಜರುಗಿತು.

ನಗರದ ಹೊಸೂರ ಕ್ರಾಸ್ ನಿಂದ ಏರ್ ಪೋರ್ಟ್ ವರೆಗೆ ನಾಲ್ಕು ಸೆಕ್ಟರ್ ನಲ್ಲಿ ನಾಲ್ಕು ತಂಡಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ. ಪ್ರತಿ ಸೆಕ್ಟರ್ ನಲ್ಲಿ ಕನಿಷ್ಠ ನೂರು ಜನರು ಇರಬೇಕು. ಇದಕ್ಕೆ ತಯಾರಿ ಮಾಡಿಕೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.

ನಾನಾಸಾಹೇಬ್ ಪ್ರತಿಷ್ಠಾನದಿಂದ ಅಗತ್ಯ ಸಹಕಾರ ನೀಡಲಾಗುವುದು, ಸಲಕರಣೆಗಳನ್ನು ಒದಗಿಸಲಾಗುವುದು ಎಂದು ಪ್ರತಿಷ್ಠಾನದ ಪ್ರಮುಖ ಸುನಿಲ ಅರಮನಿ ತಿಳಿಸಿದರು.

ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಕೃಷ್ಣ ಗಂಡಗಾಳೇಕರ, ಚೇತನ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net