ಸ್ವಚ್ಛ ಪರಿಸರ ನಡೆ, ನುಡಿಯ ಸಂಕೇತ

FotoJet 20 3
Published on

ತಿಪಟೂರು: ಸ್ವಚ್ಛ ಪರಿಸರ ನಮ್ಮ ನಡೆ, ನುಡಿಯ ಸಂಕೇತ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.

ತಾಲೂಕಿನ ಈಚನೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛೋತ್ಸವ ಕಾರ್ಯಕ್ರವದಲ್ಲಿ ಚಾಲನೆ ನೀಡಿ ವಾತನಾಡಿ, ವಾಸಿಸುವ ಪರಿಸರ ಸ್ವಚ್ಛವಾಗಿದ್ದರೆ ನಾವುಗಳು ಆರೋಗ್ಯವಾಗಿರುತ್ತೇವೆ. ಯಾವುದೇ ಒಂದು ಪ್ರದೇಶದ ಪರಿಸರ ಹಾಗೂ ಸ್ವಚ್ಛತೆ ಅಲ್ಲಿನ ಜನರ ನಡೆ, ನುಡಿ, ಮತ್ತು ಅಭಿವೃದ್ಧಿಯನ್ನು ತೋರಿಸುತ್ತದೆ. ಕೆಲ ದೇಶಗಳಲ್ಲಿ ಅಭಿವೃದ್ಧಿಯನ್ನು ಗುರುತಿಸಲು ಅಲ್ಲಿನ ಪರಿಸರ ಮತ್ತು ಸ್ವಚ್ಛತೆಯನ್ನು ವಾನದಂಡವಾಗಿ ಬಳಸಲಾಗುತ್ತದೆ. ಯಾವುದೇ ಸಾಧನೆಗೆ ಆರೋಗ್ಯ ಮತ್ತು ಶಿಕ್ಷಣ ಒಂದಕ್ಕೊಂದು ಪೂರಕ ಎಂದು ತಿಳಿಸಿದರು.

ಈಚನೂರು ಗ್ರಾಪಂ ವತಿಯಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ, ಗ್ರಾಪಂ ಸ್ವಚ್ಛತಾ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧ ವಿತರಿಸಲಾಯಿತು.

ಶಾಲಾ ಮಕ್ಕಳಿಂದ ಸ್ವಚ್ಛತೆ ಮತ್ತು ವಾದಕ ಮುಕ್ತ ಕರ್ನಾಟಕ ಆಭಿಯಾನದ ಕುರಿತು ಕಿರುನಾಟಕ ಪ್ರದರ್ಶನ ಹಾಗೂ ಬೈಕ್ ರ‌್ಯಾಲಿಯ ಮೂಲಕ ಅರಿವು ಮೂಡಿಸಲಾಯಿತು.

ಜಿಪಂ ಮುಖ್ಯ ಯೋಜನಾಧಿಕಾರಿ ಸಣ್ಣಮರಿಯಪ್ಪ, ತಾಪಂ ಇಒ ಎಚ್.ಎಂ.ಸುದರ್ಶನ್, ಈೀಚನೂರು ಗ್ರಾಪಂ ಅಧ್ಯಕ್ಷ ಕೆ.ಎನ್.ಉದಯಕುವಾರ್, ಉಪಾಧ್ಯಕ್ಷೆ ಗೀತಾ, ಪಿಡಿಒ ಪಿ.ಲತಾ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net