ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗಿ

11ALD 02
ಘಟ್ಟಿರಡ್ಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡ ನೆಡಲಾಯಿತು. ಮುಖ್ಯಶಿಕ್ಷಕ ಮಹಮದ್ ರಫಿ, ಶಿಕ್ಷಕರಾದ ನೇತ್ರಾ ಹರ್ಲಾಪುರ, ಗಂಗಮ್ಮ ಕೊಂಚಿಗೇರಿ, ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ ಗದ್ದಿಕೇರಿ, ಅರ್ಪಿತಾ ಇದ್ದರು.
Published on

ಅಳವಂಡಿ: ಮನುಷ್ಯನ ಆರೋಗ್ಯಕರ ಜೀವನಕ್ಕೆ ಶುದ್ಧ ಪರಿಸರ ಅವಶ್ಯ. ಹೀಗಾಗಿ ಪ್ರತಿಯೊಬ್ಬರು ಗಿಡ ನೆಟ್ಟು ಬೆಳೆಸಬೇಕು ಎಂದು ಮುಖ್ಯಶಿಕ್ಷಕ ಮಹಮದ್ ರಫಿ ಹೇಳಿದರು.

ಸಮೀಪದ ಘಟ್ಟಿರಡ್ಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪರಿಸರ ದಿನದ ಅಂಗವಾಗಿ ಗಿಡ ನೆಟ್ಟು ಮಂಗಳವಾರ ಮಾತನಾಡಿದರು. ಕೆಟ್ಟ ವಿಚಾರಗಳು ಬದುಕನ್ನು ದುರ್ಬಲಗೊಳಿಸುತ್ತವೆ. ಅದರಂತೆ ಮಲೀನ ಪರಿಸರ ಮನುಷ್ಯನ ಆರೋಗ್ಯ ಹಾಳು ಮಾಡುತ್ತದೆ.

ಅನಾರೋಗ್ಯ ಇದ್ದರೆ ಮನಸ್ಸು ದುರ್ಬಲಗೊಂಡು ಏನನ್ನು ಸಾಧಿಸಲಾಗದು. ಕಾರಣ ಗಿಡ ನೆಡುವ ಮೂಲಕ ಸ್ವಚ್ಛ ಪರಿಸರ ನಿರ್ಮಿಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದರು. ಶಿಕ್ಷಕರಾದ ನೇತ್ರಾ ಹರ್ಲಾಪುರ, ಗಂಗಮ್ಮ ಕೊಂಚಿಗೇರಿ, ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ ಗದ್ದಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net