

ಮಾನ್ವಿ: ತಾಲೂಕಿನ ಕೆಲ ಗ್ರಾಮಗಳಲ್ಲಿ ಫ್ಲೊರೈಡ್ ನೀರು ದೊರೆಯುತ್ತಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಶನಿವಾರ 2018-19ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಲ್ಲಿ ನಿರ್ಮಿಸಿದ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿವ ನೀರಿನ ಕೊರತೆಯಾಗದಂತೆ 300 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅಂತರ್ಜಲ ಸಮಸ್ಯೆಯಿದ್ದ, 180 ಬೋರ್‌ವೆಲ್‌ಗಳಲ್ಲಿ ಮಾತ್ರ ನೀರು ಬಂದಿವೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಪಾಟೀಲ್ ಬಲ್ಲಟಗಿ, ರಾಜ್ಯ ಯುವ ಘಟಕದ ಮುಖಂಡ ರಾಜಾ ರಾಮಚಂದ್ರನಾಯಕ, ಮುಖಂಡರಾದ ಜಂಭುನಾಥ ಯಾದವ್, ವೆಂಕಟನರಸಿಂಹಗೌಡ, ನಾಗರಾಜ್ ಭೋಗಾವತಿ, ಗೋಪಾಲನಾಯಕ ಹರವಿ, ಖಲೀಲ್ ಖುರೇಶಿ, ಶ್ರೀಧರಸ್ವಾಮಿ, ಬಸವರಾಜಶೆಟ್ಟಿ, ಮೌಲಾಸಾಬ್, ಅಮರೇಶನಾಯಕ ಬ್ಯಾಗವಾಟ್, ಅಮರೇಶನಾಯಕ ಆಲ್ದಾಳ, ವೆಂಕಟೇಶನಾಯಕ ಆಲ್ದಾಳ ಇನ್ನಿತರರು ಇದ್ದರು.