ಶುದ್ಧ ಕುಡಿಯುವ ನೀರು ಅಗತ್ಯ

h29-rotary club
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಈಸ್ಟ್ ಮತ್ತು ಶ್ರೀ ಗುರುಪಾದೇಶ್ವರ ಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ್ ನೆಹರೂ ಪ್ರೌಢಶಾಲೆಯಲ್ಲಿ ಆರ್‌ಒ ಶುದ್ಧ ಕುಡಿಯುವ ನೀರಿನ ಘಟಕವನ್ನು ಶನಿವಾರ ಉದ್ಘಾಟಿಸಲಾಯಿತು.

ಪೂರ್ವ ಡಿಸ್ಟ್ರಿಕ್ಟ್ ಗವರ್ನರ್ ಬಾಜಿಲ್ ಡಿಸೋಜಾ ಉದ್ಘಾಟಿಸಿ ಮಾತನಾಡಿ, ಮಕ್ಕಳು ಆರೋಗ್ಯದಿಂದ ಇರಲು ಶುದ್ಧ ನೀರು ಮತ್ತು ಪೌಷ್ಟಿಕ ಆಹಾರ ಅಗತ್ಯ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿರುವುದು ಶ್ಲಾಘನೀಯ ಎಂದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಈಸ್ಟ್ ಅಧ್ಯಕ್ಷ ಪ್ರಭು ಲಿಗಾಡಿ, ಕಾರ್ಯದರ್ಶಿ ರಾಹುಲ್ ನಾಗಮುಳೆ, ಗ್ರಾಪಂ ಅಧ್ಯಕ್ಷೆ ನಿರ್ಮಲಾ ಚವಡಶೆಟ್ಟಿ, ಪ್ರಾಚಾರ್ಯ ಐ.ವಿ. ಕಾಳೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net