’ನನ್ನ ಜೀವನ, ನನ್ನ ಸ್ವಚ್ಚ ನಗರ’ ಕಾರ್ಯಕ್ರಮಕ್ಕೆ ಚಾಲನೆ

20mdk13
Published on

ಮಡಿಕೇರಿ:

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ಪೌರಾಯುಕ್ತ ವಿಜಯ ಕಸ ಸಂಗ್ರಹಣೆ ಹಾಗೂ ತ್ಯಾಜ್ಯವನ್ನು ನೀಡುವ ಮೂಲಕ ನನ್ನ ಜೀವನ, ನನ್ನ ಸ್ವಚ್ಚ ನಗರ ಕಾರ್ಯಕ್ರಮಕ್ಕೆ ಶನಿವಾರ ಟೌನ್ ಹಾಲ್ ಬಳಿಯಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನಗರಸಭೆ ಪೌರಾಯುಕ್ತ ವಿಜಯ್ ತಮ್ಮ ಮನೆಗಳಲ್ಲಿ ಇರುವ ತ್ಯಾಜ್ಯವನ್ನು ಈ ಆರ್‌ಆರ್‌ಆರ್ ಕೇಂದ್ರಗಳಿಗೆ ನೀಡಿದ್ದಲ್ಲಿ, ಈ ತ್ಯಾಜ್ಯಗಳಲ್ಲಿ ಉಪಯೋಗವಾಗುವ ವಸ್ತುಗಳನ್ನು ಅವಶ್ಯವಿರುವವರಿಗೆ ಉಪಯೋಗಕ್ಕಾಗಿ ನೀಡಲಾಗುತ್ತದೆ. ಇನ್ನುಳಿದ ತ್ಯಾಜ್ಯವನ್ನು ಮರು ಬಳಕೆಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ೨ ಅಡಿಯಲ್ಲಿ ಜೂನ್, ೦೫ ರವರೆಗೆ ನನ್ನ ಜೀವನ, ನನ್ನ ಸ್ವಚ್ಚ ನಗರ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್‌ಆರ್‌ಆರ್(ರೆಡ್ಯೂಸ್, ರೆಸ್ಕ್ಯೂ, ರೀ ಸೈಕಲ್) ಕೇಂದ್ರಗಳನ್ನು ನಗರ ವ್ಯಾಪ್ತಿಯಲ್ಲಿ ೫ ಸ್ಥಳಗಳಲ್ಲಿ ಮಡಿಕೇರಿ ನಗರಸಭೆ ವತಿಯಿಂದ ತೆರೆಯಲಾಗಿದೆ.

ಆಟಿಕೆ ಸಾಮಾಗ್ರಿಗಳು, ಬಟ್ಟೆ-ಹಳೆಯ ಜೀನ್ಸ್, ಸಮವಸ್ತ್ರ, ಸೀರೆಗಳು ಇತರೆ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು ಹೀಗೆ ೬ ವಿಧದ ನಿರುಪಯುಕ್ತ ವಸ್ತುಗಳನ್ನು ಸಾರ್ವಜನಿಕರಿಂದ ಈ ಆರ್‌ಆರ್‌ಆರ್ ಕೇಂದ್ರಗಳಿಗೆ ದೇಣಿಗೆಯಾಗಿ ಪಡೆಯುವುದರ ಮೂಲಕ ಈ ವಸ್ತುಗಳನ್ನು ಅಗತ್ಯವಿರುವವರಿಗೆ ಉಪಯೋಗಕ್ಕಾಗಿ ನೀಡಲಾಗುವುದು. ಹಾಗೂ ಇನ್ನುಳಿದ ತ್ಯಾಜ್ಯವನ್ನು ಮರು ಬಳಕೆಗೆ ಕಳುಹಿಸಿಕೊಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net