ಯುವಕರಿಂದ ಅರಣ್ಯಕ್ಕೆ ಚೇತನ : ಪರಿಸರಪ್ರೇಮಿ ಜೀತ್ ಮಿಲನ್ ರೋಶ್ ಆಶಯ

abhiyana
ಕುಂದಾಪುರದ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ‘ಸ್ವಚ್ಛ ಕಡಲ ತೀರ- ಹಸಿರು ಕೋಡಿ’ ಅಭಿಯಾನ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಮಾನವನ ಅತಿಕ್ರಮಣ, ವಿವಿಧ ಯೋಜನೆಗಳ ಕಾರಣದಿಂದಾಗಿ ಮರಗಳ ಮಾರಣ ಹೋಮವಾಗುತ್ತಿದೆ. ಜಗತ್ತಿನಲ್ಲಿ ಈಗಾಗಲೇ ಶೇ.58ರಷ್ಟು ಅರಣ್ಯ ನಾಶವಾಗಿದೆ. ಭಾರತದಲ್ಲಿ ಪ್ರಸ್ತುತ ಶೇ.3 ಅರಣ್ಯ ಸಮೃದ್ಧಿಯಲ್ಲಿದೆ. ಇನ್ನು ಮುಂದಾದರೂ ಯುವಕರು ಅರಣ್ಯಕ್ಕೆ ಚೇತನ ನೀಡಬೇಕು ಎಂದು ಪರಿಸರಪ್ರೇಮಿ ಜೀತ್‌ಮಿಲನ್ ರೋಶ್ ಹೇಳಿದರು.

ಕುಂದಾಪುರದ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾದ 32ನೇ ‘ಸ್ವಚ್ಛ ಕಡಲ ತೀರ- ಹಸಿರು ಕೋಡಿ’ ಅಭಿಯಾನದಲ್ಲಿ ಮಾತನಾಡಿದರು. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ದೇವರು ನೀಡಿದ ಸುಂದರ ಕಡಲತೀರ ಪರಿಸರವನ್ನು ಶುಚಿಯಾಗಿಡುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಕಾರ್ಯವನ್ನು ‘ಸ್ವಚ್ಛ ಕಡಲ ತೀರ-ಹಸಿರು ಕೋಡಿ’ ಅಭಿಯಾನದ ಮುಖೇನ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ಸಸಿ ವಿತರಿಸಿದರು. ಶಾಲೆಯ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸೀಫ್ ಬ್ಯಾರಿ, ಪುರಸಭಾ ಸದಸ್ಯರಾದ ಕಮಲಾ, ಲಕ್ಷ್ಮೀ, ವಿವಿಧ ಅಂಗ ಸಂಸ್ಥೆಗಳ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net