ಶುದ್ಧ ವಾಯು ದಿನಾಚರಣೆ ಉದ್ಘಾಟನೆ

New Project (1)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ವಿಶ್ವ ಶುದ್ಧ ಗಾಳಿ ದಿನಾಚರಣೆಯ ಕಾಸರಗೋಡು ಜಿಲ್ಲಾಮಟ್ಟದ ಕಾರ್ಯಕ್ರಮ ಕಾಞಂಗಾಡ್ ದಕ್ಷಿಣ ಸರ್ಕಾರಿ ವೃತ್ತಿಪರ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿತು.

ಜಿಲ್ಲಾ ಎನ್‌ಸಿಡಿ ನೋಡಲ್ ಅಧಿಕಾರಿ ಡಾ.ಪಿ.ರಂಜಿತ್ ಕಾರ್ಯಕ್ರಮ ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಕೆ.ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಎಂ.ಎ.ಅಬ್ದುಲ್ ಬಶೀರ್, ಅಪರ ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಪಿ.ಪಿ.ಹಸೀಬ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಆರ್.ಮಂಜು, ಸಿಬ್ಬಂದಿ ಕಾರ್ಯದರ್ಶಿ ಕೆ.ಪಿ.ರಂಜಿತ್, ಹಿರಿಯ ಸಹಾಯಕಿ ಸಿ.ಶಾರದಾ ಉಪಸ್ಥಿತರಿದ್ದರು.

ಜಾಗೃತಿ ವಿಚಾರ ಸಂಕಿರಣದಲ್ಲಿ ಜಿಲ್ಲಾ ಎನ್‌ಸಿಡಿ ನೋಡಲ್ ಅಧಿಕಾರಿ ಡಾ.ಪಿ.ರಂಜಿತ್ ತರಗತಿ ನಡೆಸಿದರು. ಜಿಲ್ಲಾ ವೈದ್ಯಕೀಯ ಕಚೇರಿ(ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗಾಗಿ ನೇರ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಾಂಶುಪಾಲ ಪಿ.ಎಸ್.ಅರುಣ್ ಸ್ವಾಗತಿಸಿದರು. ವೃತ್ತಿ ಶಿಕ್ಷಕ ಪಿ.ಸಮೀರ್ ಸಿದ್ದಿಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net