ಸೆ.4 ಮತ್ತು 5ರಂದು ಮಣ್ಣಿನ ಗಣಪತಿ ಕಾರ್ಯಾಗಾರ

17gkn1-a- GANAPATI (1)
Published on

ಮೈಸೂರು: ಪರಿಸರ ಬಳಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ-1ರ ಸಹಯೋಗದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸೆ.4 ಮತ್ತು 5ರಂದು ಮಣ್ಣಿನ ಗಣಪತಿ ಮಾಡುವ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಪರಿಸರ ಬಳಗದ ಸಂಸ್ಥಾಪಕ ಪರಶುರಾಮೇಗೌಡ ತಿಳಿಸಿದರು.

ಕಾರ್ಯಾಗಾರವನ್ನು ಎರಡೂ ದಿನವು ವಿಜಯನಗರದ 1ನೇ ಹಂತದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಎದುರಿನ ಪಾರ್ಕಿನಲ್ಲಿ ಹಾಗೂ ಸಿದ್ಧಾರ್ಥನಗರ ಬಡಾವಣೆಯ ಲಲಿತ್ ಮಹಲ್ ಪ್ಯಾಲೇಸ್‌ನ ಹೋಟೆಲ್ ಪಕ್ಕದ ಮೈದಾನದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಜೆಎಸ್‌ಎಸ್ ವಿದ್ಯಾಸಂಸ್ಥೆ, ಶಾಂತಲಾ ವಿದ್ಯಾಪೀಠ, ತಿರುಮಲ ಪಬ್ಲಿಕ್ ಶಾಲೆ, ಭಾರತೀಯ ವಿದ್ಯಾಭವನ ಶಾಲೆ, ಸಂಜೀವಯ್ಯ ಶಾಲೆ ಇನ್ನಿತರ ಶಾಲೆಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮಣ್ಣಿನ ಮೂಲಕ ಗಣಪತಿ ತಯಾರಿಸಲಾಗುವುದು ಎಂದು ಮಾಹಿತಿ ನೀಡಿದರು.

ಶಿಲ್ಪಕಲೆಯಲ್ಲಿ ಪರಿಣತಿ ಮತ್ತು ಅನುಭವವಿರುವ ಶಿಲ್ಪಿಗಳಿಂದ ಮಣ್ಣಿನ ಗಣಪತಿ ಮಾಡುವುದನ್ನು ಹೇಳಿಕೊಡಲಾಗುತ್ತದೆ. ಜತೆಗೆ ಪರಿಸರ ಬಳಗದ ಸ್ವಯಂ ಸೇವಕರಿಂದ ಜೇಡಿಮಣ್ಣನ್ನು ಒದಗಿಸಲಾಗುತ್ತದೆ. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾವೇ ತಯಾರಿಸಿದ ಗಣಪತಿಯನ್ನು ಮನೆಗೆ ತೆಗೆದುಕೊಂಡು ಹೋಗುವ ಅವಕಾಶವಿದೆ. ಗಣಪತಿ ತಯಾರಿಸುವ ಸಂದರ್ಭದಲ್ಲಿ ಸಾರ್ವಜನಿಕರು ವೀಕ್ಷಿಸಬಹುದು. ಹೀಗಾಗಿ ಸಾರ್ವಜನಿಕರೆಲ್ಲರೂ ಪರಿಸರಕ್ಕೆ ಹಾನಿಯಾಗದಂತೆ ಪರಿಸರಸ್ನೇಹಿ ಮಣ್ಣಿನ ಗಣಪತಿ ಮೂರ್ತಿಯನ್ನೇ ಮನೆಯಲ್ಲಿ ಪೂಜಿಸಿ ಎಂದು ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗೆ ದೂ.9980399368, 8310285546/95387ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಪರಿಸರ ಬಳಗದ ಸದಸ್ಯರಾದ ಸತೀಶ್, ಶಾಂತ ಕೃಷ್ಣ, ಪ್ರಭಾ, ವೆಂಕಟಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net