ಮೃಣ್ಮಯ ವಿಗ್ರಹ ರಚನೆ ಪಾರಂಪರಿಕ ಶೈಲಿ

mng-19sep-kalkura
Published on



ಮಂಗಳೂರು : ಮಣ್ಣಿನ ವಿಗ್ರಹ ರಚನೆ ಭಾರತದ ಪಾರಂಪರಿಕ ಕಲೆಯಲ್ಲಿ ಒಂದಾಗಿದೆ. ದಿ.ಮೋಹನ್ ರಾವ್ ಅವರ ಕುಟುಂಬದವರು ತುಳುನಾಡಿನ ಪಾರಂಪರಿಕ ಶೈಲಿಯ ಮೃಣ್ಮಯ ಮೂರ್ತಿಗಳನ್ನು ನಿರ್ಮಿಸುತ್ತಿರುವುದು ಮಂಗಳೂರು ಮಹಾನಗರಕ್ಕೆ ಭೂಷಣ ಪ್ರಾಯವಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ನಗರದ ಪ್ರಮುಖ ಗಣೇಶೊತ್ಸವಗಳಿಗೆ ಗಣೇಶನ ಮೃಣ್ಮಯ ಮೂರ್ತಿಗಳನ್ನು ರಚಿಸಿ ಕೊಡುತ್ತಿರುವ ಪ್ರಭಾಕರ ರಾವ್ ಮಣ್ಣಗುಡ್ಡೆ ಮತ್ತು ಸಹೋದರರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಗೌರವಿಸಿ ಅವರು ಮಾತನಾಡಿದರು.
ಚಂದ್ರಕಾಂತ ರಾವ್, ಪ್ರಸಾದ್ ಉಪಾಧ್ಯಾಯ, ಮಹೇಶ್ ಭಕ್ತ, ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ, ಚಂದ್ರಶೇಖರ ಮಯ್ಯ, ಕೇಶವ ನಂದೊಡಿ,ಬೆಳುವಾಯಿ ಸುಂದರ ಆಚಾರ್ಯ, ಗೀತಾ ಲಕ್ಷ್ಮೀಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net