ತಂತ್ರಜ್ಞಾನ ಆಧಾರಿತ ಶಿಕ್ಷಣ

inau
Published on

ಹೆಬ್ರಿ: ಹೆಬ್ರಿ ಪ್ರೌಢಶಾಲೆ ಅಭಿವೃದ್ಧಿಪಥದಲ್ಲಿ ಸಾಗಲು ಹರೀಶ ಪೂಜಾರಿಯಂತಹ ಹಳೇ ವಿದ್ಯಾರ್ಥಿಗಳ ಕೊಡುಗೆ ಮಹತ್ವದ್ದು. ಶಾಲೆಯಲ್ಲಿ ಮೂಲಸೌಲಭ್ಯದ ಜತೆಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ಉದ್ದೇಶ ಪೂರ್ಣಗೊಳಿಸಲು ಎಲ್ಲರ ಸಹಕಾರಬೇಕು ಎಂದು ಅಮೃತ ಭಾರತಿ ಟ್ರಸ್ಟ್ ಟ್ರಸ್ಟಿ ರಾಜೇಶ ನಾಯಕ್ ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಬ್ರಿಯಲ್ಲಿ ನವೀಕೃತ ತಂತ್ರಜ್ಞಾನ ಆಧಾರಿತ ತರಗತಿ ಕೊಠಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಠಡಿ ದಾನಿ ಸಿಎ ಹರೀಶ ಪೂಜಾರಿ ಅವರ ತಾಯಿ ಹೆಬ್ರಿ ಬಲ್ಲೆಮನೆ ಕಮಲಾ ಪೂಜಾರ್ತಿ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ವಿಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಧುಸೂದನ ಪೂಜಾರಿ, ಸುಗುಣಾ ಪೂಜಾರಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ದಿವಾಕರ ಮರಕಾಲ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಂಜೇಗೌಡ ವಂದಿಸಿದರು. ಗಣಿತ ಅಧ್ಯಾಪಕ ವೆಂಕಟರಮಣ ಕಲ್ಕೂರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net